ಮೈಶುಗರ್ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಬೇಕು – ಸಿದ್ದರಾಮಯ್ಯ

Team Newsnap
1 Min Read

ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡದೇ ಸರ್ಕಾರಿ ಸ್ವಾಮ್ಯದಲ್ಲೆ ಇರಬೇಕು. 65 ಸಕ್ಕರೆ ಕಾರ್ಖಾನೆಯಲ್ಲಿ ಮೈಶುಗರ್ ಒಂದೇ ಸರ್ಕಾರಿ ಸ್ವಾಮ್ಯದಲ್ಲಿದೆ. ಅದನ್ನು ರಕ್ಷಣೆ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿ ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೆ ಮೈಸೂರು ಅರಸರು ರೈತರಿಗೆ ಅನುಕೂಲವಾಗಲಿ ಎಂದು ಮೈಶುಗರ್ ಕಾರ್ಖಾನೆ ಕಟ್ಟಿಸಿದ್ರು. 1933ರಲ್ಲಿ ಪ್ರಾರಂಭವಾದ ಕಾರ್ಖಾನೆ ಮೈಶುಗರ್.
ಬಹಳ ವರ್ಷಗಳ ಕಾಲ ಲಾಭದಾಯಕವಾಗಿ ನಡೆದಿರುವ ಸಂಸ್ಥೆ. ಕಾರಣಾಂತರದಿಂದ ಕಾರ್ಖಾನೆ ನಷ್ಟವಾಗಿದೆ. ಇದಕ್ಕೆ ರೈತರು ಹೊಣೆಯಲ್ಲ, ಸರ್ಕಾರವೇ ಇದಕ್ಕೆ ಹೊಣೆಯಾಗಿದೆ ಎಂದರು.

ಕೆಲವು ಸಂಸ್ಥೆಗಳು ನಷ್ಟದಲ್ಲಿದೆ ಎಂದು ಮಾರುವುದಕ್ಕೆ ಆಗುತ್ತಾ? ಪುನರ್ ಜೀವ ಕೊಡಬೇಕು.
ಯಾಕೇ ನಷ್ಟವಾಗ್ತಿದೆ? ಯಾವ ರೀತಿ ಚಿಕಿತ್ಸೆ ನೀಡಬೇಕೆಂದು ಸರ್ಕಾರ ಚಿಂತನೆ ನಡೆಸಿಲ್ಲ.
ಕಾರ್ಖಾನೆಯನ್ನು ಮಾರುವ ಪ್ರಯತ್ನಕ್ಕೆ, ಹುಚ್ಚು ಸಾಹಸಕ್ಕೆ ಸರ್ಕಾರ ಕೈ ಹಾಕಿದೆ ಎಂದು ಟೀಕಿಸಿದರು

ಯಡ್ಡಿಯೂರಪ್ಪ ಕಾರ್ಖಾನೆ ಪ್ರಾರಂಭ ಮಾಡ್ತಾರೆ ಅಂದುಕೊಂಡಿದ್ರು ಆದ್ರೆ ಅವರು ಕೈ ಎತ್ತುಬಿಟ್ರು.ಯಡ್ಡಿಯೂರಪ್ಪ ಅವರ ಕಾಲದಲ್ಲೆ ಖಾಸಗಿಗೆ ನೀಡಬೇಕು ಅಂತ ಹೊರಟಿದ್ದರು. ಈ ಕಾರ್ಖಾನೆಯನ್ನು ಕೂಡ ನಿರಾಣಿ ಖರೀದಿ ಮಾಡಲು
ಮುಂದಾಗಿದ್ದ ಎಂದರು.

ಈ ಬಾರಿಯ ಬಜೆಟ್ ದೊಡ್ಡದು ಅದರಲ್ಲಿ ಮುನ್ನೂರು ನಾನೂರು ಕೋಟಿ ಖರ್ಚು ಮಾಡಿದ್ರೆ ಒಳ್ಳೆದಾಗತ್ತೆ. ಮತ್ತೊಮ್ಮೆ ಸಿಎಂ ಅವರಿಗೆ ನಾನು ಮನವಿ ಮಾಡ್ತಿನಿ.ಅವರು ಮಾಡ್ಲಿಲ್ಲ ಅಂದ್ರೆ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರತ್ತೆ ಆಗ ನಾವು ಮಾಡ್ತಿವಿ.ನಮ್ಮ ಸಕಾ೯ರ ಬಂದ ಒಂದು ತಿಂಗಳಲ್ಲಿ ಕಾರ್ಖಾಬೆ ಪ್ರಾರಂಭ ಮಾಡ್ತಿನಿ. ಧರಣಿಯನ್ನ ಇನ್ನು ಮುಂದೆ ನಿಲ್ಲಿಸಬೇಕು ಅನ್ನೋದು
ನನ್ನ ಅಭಿಪ್ರಾಯ.


ಧರಣಿ ಕೈಬಿಡುವ ತೀರ್ಮಾನ ನಿಮ್ಮದು. ಸರ್ಕಾರ ಮಾರಾಟ ಮಾಡಲ್ಲ ಅಂತ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ನಾನು ನಿಮ್ಮ ಜೊತೆ ಇರ್ತಿನಿ‌. ನಾನು ರೈತ ಸಂಘದಲ್ಲೆ ಇದ್ದವನು ಎಂದರು.

Share This Article
Leave a comment