March 12, 2026

Newsnap Kannada

The World at your finger tips!

sucide

ಮಗನೂ ಸೇರಿ ಕುಟುಂಬದವರ ಸಾಮೂಹಿಕ ಆತ್ಮಹತ್ಯೆ

Spread the love

ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಂಡಿದ್ದ ವ್ಯಕ್ತಿಯೊಬ್ಬ ಪತ್ನಿ, ಮಗನೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರುಗಿದೆ.

ಮುಲ್ಕಿ ಸಮೀಪದ ಹಳೆಅಂಗಡಿಯ ಕಲ್ಲಾಪುರಿ ಬಡಾವಣೆಯಲ್ಲಿ ವಿನೋದ್ ಸಾಲಿಯಾನ (40) ರಚನಾ( 32 ) ಹಾಗೂ ಸಾಧ್ಯ ಸಾಲಿಯಾನ್ (8) ಅವರುಗಳೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಭಾನುವಾರ ಮನೆಯಿಂದ ಯಾರೂ ಹೊರಗೆ‌ ಬರಲಿಲ್ಲ. ಅಕ್ಕ ಪಕ್ಜದವರು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂತು. ಪೋಲಿಸರಿಗೆ ಮಾಹಿತಿ ನೀಡಿದ ನಂತರ ಮುಲ್ಕಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!