11 ವರ್ಷಗಳ ಬಳಿಕ ಅಕ್ಟೋಬರ್‌ನಲ್ಲಿ ಕೆಆರ್‌ಎಸ್‌ ಡ್ಯಾಂ ಸಂಪೂರ್ಣ ಭರ್ತಿ

Team Newsnap
1 Min Read

ಕೆಆರ್‌ಎಸ್ ನೀರಿನ ಮಟ್ಟ

ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು.
ಜಲಾಶಯದ ಇಂದಿನ ನೀರಿನ ಮಟ್ಟ 124.80 ಅಡಿಗಳು.
ಇಂದಿನ ಒಳಹರಿವಿನ ಪ್ರಮಾಣ 8,767 ಸಾವಿರ ಕ್ಯೂಸೆಕ್.
ಇಂದಿನ ಹೊರ ಹರಿವಿನ ಪ್ರಮಾಣ 3,667 ಸಾವಿರ ಕ್ಯೂಸೆಕ್.
ಜಲಾಶದ ಗರಿಷ್ಠ ನೀರಿನ ಸಂಗ್ರಹ – 49.452 ಟಿಎಂಸಿ.
ಇಂದಿನ ಸಂಗ್ರಹ 49.452 ಟಿಎಂಸಿ.

ಕಳೆದ ಹದಿನೈದು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರಿಂದ ಇಂದು ಕೆಆರ್‌ಎಸ್‌ ಸಂಪೂರ್ಣವಾಗಿ ಭರ್ತಿಯಾಗಿದೆ. 11 ವರ್ಷದ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದೆ.

ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಬೀಳದ ಕಾರಣವಾಗಿ ಇಂದು ಭರ್ತಿಯಾಗಿದೆ. 2009ರಲ್ಲಿ ಅಕ್ಟೋಬರ್ 28 ರಂದು ಭರ್ತಿಯಾಗಿತ್ತು.

ಈ ಬಾರಿ ಕೆಆರ್‌ಎಸ್‌ ಭರ್ತಿಯಾಗುವುದಿಲ್ಲ ಎಂಬ ಆತಂಕ ಇದ್ದ ಕಾರಣ ಅಕ್ಟೋಬರ್ 7 ರಂದು ಜ್ಯೋತಿಷಿ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಕೆಆರ್‌ಎಸ್‌ ಡ್ಯಾಂ ಬಳಿ ಹೋಮ ಹಾಗೂ ವಿಶೇಷ ಪೂಜೆಯಲ್ಲಿ ಮಾಡಲಾಗಿತ್ತು.

ಈ ಹೋಮ ಹಾಗೂ ಪೂಜೆಯಲ್ಲಿ ಸಿಎಂ ಬಸವರಾಜ ಬೊಮ್ಮಯಿ ಅವರು ತಮ್ಮ ಕುಟುಂಬ ಸಮೇತ ಭಾಗಿಯಾಗಿದ್ದರು.

ನಂತರ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಇಂದು ಕೆಆರ್‌ಎಸ್‌ ಸಂಪೂರ್ಣ ಭರ್ತಿಯಾಗಿದೆ. ಕೆಆರ್‌ಎಸ್‌ ಭರ್ತಿಯಾಗಿರುವ ಹಿನ್ನೆಲೆ ಬಸವರಾಜ ಬೊಮ್ಮಯಿ ಅವರು ಕೆಲವೇ ದಿನಗಳಲ್ಲಿ ಬಾಗಿನ ಅರ್ಪಿಸಲು ಕೆಆರ್‌ಎಸ್‍ಗೆ ಆಗಮಿಸಲಿದ್ದಾರೆ.

Share This Article
Leave a comment