ಕೊಲೆ ಮಾಡಿ ಶವವನ್ನು ಸ್ಕೂಟರ್ ನಲ್ಲಿ ಹಾಕಿಕೊಂಡು ಬಂದ ಹಂತಕ !

Team Newsnap
1 Min Read

ಬೆಂಗಳೂರು : ವ್ಯಕ್ತಿಯೋರ್ವನನ್ನು ಕೊಲೆಗೈದಿದ್ದಲ್ಲದೇ ಅವನ ಶವವನ್ನು ಟಿವಿಎಸ್ ಎಕ್ಸೆಲ್ ವಾಹನದಲ್ಲಿ ತಂದು ಮನೆಯ ಮುಂದೆ ಬಿಸಾಕಿ ಹೋಗಿರುವ ವಿಲಕ್ಷಣ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೊಹಮ್ಮದ್ ಸಲೀಂ ಮೃತ ದುರ್ದೈವಿ. ಆರೋಪಿಗಳಾದ ಚರಣ್ ಮತ್ತು ನಾರಾಯಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಸಲೀಂ ಹೊಟ್ಟೆಪಾಡಿಗಾಗಿ ಉದ್ಯೋಗವನ್ನರಸಿಕೊಂಡು ಆನೇಕಲ್ ಗೆ ಬಂದಿದ್ದು ಮುಗಳೂರಿನ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ಆತನ ಪತ್ನಿ ಐದು ಮಕ್ಕಳ ತಾಯಿಯಾಗಿದ್ದು, ಚರಣ್ ಎಂಬಾತನ ಬಳಿ ಸೊಪ್ಪು ಕುಯ್ಯವ ಕೆಲಸ ಮಾಡುತ್ತಿದ್ದಳು. ಚರಣ್ ಆಗಾಗ್ಗೆ ಸಲೀಂ ಪತ್ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಮದ್ಯ ವ್ಯಸನಿಯಾಗಿದ್ದ ಸಲೀಂ ಹಾಗೂ ಚರಣ್ ನಡುವೆ ಈ ಬಗ್ಗೆ ಹಲವು ಬಾರಿ ವಾಗ್ವಾದ ನಡೆದಿತ್ತು.

ಸೋಮವಾರ ರಾತ್ರಿ ತನ್ನ ಜನ್ಮದಿನ ಎಂದು ಚರಣ್ , ಸಲೀಂನನ್ನು ಪಾರ್ಟಿಗೆ ಕರೆದೊಯ್ದಿದ್ದ. ಜೊತೆಗಿದ್ದ ನಾರಾಯಣಪ್ಪ ಸೇರಿದಂತೆ ಮೂವರೂ ಕಂಠಪೂರ್ತಿ ಮದ್ಯಸೇವನೆ ಮಾಡಿದ್ದರು. ಈ ವೇಳೆ ಮಾತು ಬೆಳೆದು ನಾರಾಯಣಪ್ಪ ಸಲೀಂ ತಲೆಗೆ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದ.

ಸಲೀಂ ಮನೆಗೆ ಬಾರದಿದ್ದಾಗ ಅನುಮಾನಗೊಂಡ ಆತನ ಪತ್ನಿ ಮತ್ತಿತರರು, ಚರಣ್ ಬಳಿ ವಿಚಾರಿಸಿದ್ದರು. ಸಲೀಂ ಪತ್ತೆಯಾಗದಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂಧ ಭೀತನಾದ ನಾರಯಣಪ್ಪ ತನ್ನ ಟಿವಿಎಸ್ ಎಕ್ಸೆಲ್ ವಾಹನವನ್ನು ಕೊಂಡೊಯ್ದು ಹತ್ಯೆ ಮಾಡಿದ್ದ ಸ್ಥಳಕ್ಕೆ ಧಾವಿಸಿ ಹೆಣವನ್ನು ವಾಹನದಲ್ಲಿರಿಸಿಕೊಂಡು ಸಲೀಂ ಮನೆಯ ಮುಂದೆ ಎಸೆದು ಹೋಗಿದ್ದ.ಆಗಸ್ಟ್ 3 ರಂದು ಪ್ರಧಾನಿ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಸಂಗತಿ ಬಯಲಾಗಿದೆ.

Share This Article
Leave a comment