ನನ್ನನ್ನು ಯಾರೋ ಅಪಹರಿಸಿದ್ದಾರೆ ಎಂದು ತಂದೆಗೆ ನಕಲಿ ಸಂದೇಶ ಕಳುಹಿಸಿದ ಮಗ 30 ಲಕ್ಷ ರುಗೆ ಬೇಡಿಕೆ ಇಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
24 ವರ್ಷದ ಪಿ. ಕೃಷ್ಣಪ್ರಸಾದ್ ನಕಲಿ ಕಿಡ್ನಾಪ್ ನಾಟಕವಾಡಿದ್ದಾನೆ. ಕೃಷ್ಣಪ್ರಸಾದ್ ತನ್ನ ಅಪಹರಣವಾಗಿದೆ ಎಂದು ತಂದೆಗೆ ಮೆಸೇಜ್ ಮಾಡಿ 30 ಲಕ್ಷ ರೂಗೆ ಬೇಡಿಕೆ ಇಟ್ಟು ಸಿಕ್ಕಿ ಬಿದಿದ್ದಾನೆ.
ಕೃಷ್ಣಪ್ರಸಾದ್ ತಂದೆ ಪೆನ್ಸಿಲಾಯಾ ಚೆನ್ನೈನ ವಡಪಲನಿಯ ಉದ್ಯಮಿಯಾಗಿದ್ದಾರೆ
ಮಗ ಕಾಣೆಯಾಗಿದ್ದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಚೆನ್ನೈ ನಗರ ಪೊಲೀಸರು ನಂತರ ಮೆಸೆಜ್ ಕಳುಹಿಸಿದ ಮೊಬೈಲ್ ಲೊಕೇಷನ್ ಹುಡುಕುವ ಮೂಲಕ ಸಿಕಂದರಾಬಾದ್‍ನಲ್ಲಿ ಕೃಷ್ಣ ಪ್ರಸಾದ್‍ನನ್ನು ಪತ್ತೆ ಮಾಡಿದ್ದಾರೆ.
ಆ ಬಳಿಕ ತಂದೆಯ ಒತ್ತಾಯದ ಮೇರೆಗೆ ಆತನಿಗೆ ಎಚ್ಚರಿಗೆ ನೀಡಿ ಪೊಲೀಸರು ಮನೆಗೆ ಕಳಿಹಿಸಿದ್ದಾರೆ.
ಕಿರು ಚಿತ್ರ ನಿರ್ಮಾಣ ಮಾಡಲು ಹಣಕ್ಕಾಗಿ ಇಂಥಹ ನಾಟಕವಾಡಿದ್ದಾನೆ ಎಂದು ತಿಳಿದು ಬಂದಿದೆ. ಮನೆಯಿಂದ ಹಣ ಪಡೆಯಲು ಅಥವಾ ತಮ್ಮ ಹೇಳಿಕೆಗಳನ್ನು ಈಡೇರಿಸಿಕೊಳ್ಳಲು ಈ ಹಿಂದೆಯೂ ಈ ರೀತಿಯ ನಕಲಿ ಅಪಹರಣ ಪ್ರಕರಣಗಳು ಸಾಕಷ್ಟು ನಡೆದಿವೆ.
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
More Stories
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ