ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಅಗ್ನಿ ಹೋತ್ರಿಗೆ ಜೀವ ಬೆದರಿಕೆ : ‘ವೈ’ ಶ್ರೇಣಿ ಭದ್ರತೆ

Team Newsnap
1 Min Read

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಕೇಂದ್ರ ಸರಕಾರ ‘ವೈ’ ಕೆಟಗರಿ ಭದ್ರತೆ ನೀಡುತ್ತದೆ

ಈ ಸಿನಿಮಾ ಭಾರೀ ವಿವಾದ ಎಬ್ಬಿಸಿದ ನಂತರ ನಿರ್ದೇಶಕರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವೆಯಂತೆ. ಈ ಹಿನ್ನೆಲೆಯಲ್ಲಿ ಭದ್ರತೆ ಕೊಡಲು ಸಕಾ೯ರ ತೀರ್ಮಾನಿಸಿದೆ

ದಿ ಕಾಶ್ಮೀರ್ ಫೈಲ್ಸ್ ‍ಸಿನಿಮಾದ ಕಥೆಯು ಸತ್ಯಕ್ಕೆ ದೂರವಾಗಿದೆ ಎಂದು ಕೆಲವರು ವಾದ ಮಾಡಿದರೆ, ನೈಜ ಘಟನೆಯನ್ನೂ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ.

ಹಲವು ತಿಂಗಳ ಕಾಲ ಸಂಶೋಧನೆ ಮಾಡಿ, ಮಾಹಿತಿ ಕಲೆ ಹಾಕಿ ಚಿತ್ರಕಥೆ ಬರೆದಿದ್ದೇನೆ. ಇದರಲ್ಲಿ ಯಾವ ಅಂಶವೂ ಕಲ್ಪನೆಯಿಂದ ಮೂಡಿದ್ದಲ್ಲ ಎಂದು ಹೇಳಿದ್ದಾರೆ.

ಕೆಲವು ಕಡೆ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಇಂತಹ ಚಿತ್ರಗಳಿಂದ ಕೋಮಗಲಭೆ ಆಗುವ ಸಾಧ್ಯತೆ ಇದೆ. ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನವನ್ನು ಈ ಸಿನಿಮಾ ಮಾಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

ಕಾಶ್ಮೀರಿ ಪಂಡಿತರ ಸಾವಿನ ಲೆಕ್ಕಾಚಾರದಲ್ಲೂ ಚರ್ಚೆ ನಡೆಯುತ್ತಿದೆ. ಗತಿಸಿರುವ ಕಾಲಕ್ಕೆ ಮತ್ತೆ ಗುದ್ದಲಿ ಹಾಕಿ, ಉತ್ಕನನ ಮಾಡುವಂತಹ ಕೆಲಸಗಳೂ ನಡೆಯುತ್ತಿವೆ. ಈ ಕಾರಣಕ್ಕಾಗಿ ನಿರ್ದೇಶಕರಿಗೆ ಭದ್ರತೆ ನೀಡಬೇಕು ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ‘ವೈ’ ಶ್ರೇಣಿ ಭದ್ರತೆ ನೀಡಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ.

Share This Article
Leave a comment