ವಿಧಾನಸಭೆಯಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆಯಾಗಬೇಕು, ಶಾಸಕರ ಕುರಿತು ಅಲ್ಲ: ಕಾಗೇರಿ

Team Newsnap
1 Min Read

“ವಿಧಾನಸಭೆಯಲ್ಲಿ ರಾಜ್ಯದ ಆರೂವರೆಕೋಟಿ ಜನರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕೇ ಹೊರತು 224 ಶಾಸಕರ ಬಗ್ಗೆ ಅಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಖಡಕ್ಕಾಗಿ ಹೇಳಿದ ಪ್ರಸಂಗ ನಡೆಯಿತು.


ಟೋಲ್‌ಗಳಲ್ಲಿ ತಮ್ಮನ್ನು ಪ್ರಶ್ನಿಸುವ ಬಗ್ಗೆ ಜೆಡಿಎಸ್‌ನ ಶಾಸಕರಾದ ಡಾ. ಕೆ. ಅನ್ನದಾನಿ ಮತ್ತು ಕೆ.ಎಂ.ಶಿವಲಿಂಗೇಗೌಡ ಸದನದಲ್ಲಿ ಪ್ರಸ್ತಾಪಿಸಿದಾಗ ಸ್ಪೀಕರ್ ಮೇಲಿನಂತೆ ನುಡಿದರು. ನಿಮ್ಮ ಸಮಸ್ಯೆಗಳ್ನು ಸಚಿವರೊಂದಿಗೆ ಕೂತು ಚರ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.


ಇದಕ್ಕೂ ಮುನ್ನ, “ನಾವು ಶಾಸಕರು, ಟೋಲ್‌ಗಳಲ್ಲಿ ನಮ್ಮ ವಾಹನ ತಡೆಯುತ್ತಾರೆ, ಗುರುತಿನ ಚೀಟಿ ಕೇಳುವುದೆಂದರೇನು? ನಮಗೇನು ಘನತೆ, ಗೌರವ ಇಲ್ಲವೇ ಎಂದು ಜೆಡಿಎಸ್‌ನ ಈ ಇಬ್ಬರು ಶಾಸಕರು ತಮ್ಮ ಅಸಮಾಧಾನ ಹೊರಹಾಕಿದರು.
ಗಮನಸೆಳೆಯುವ ಸೂಚನೆಯಡಿ ಡಾ. ಅನ್ನದಾನಿ, ರಾಜ್ಯದ ಟೋಲ್‌ಗಳಲ್ಲಿ ಗಣ್ಯ, ಅತಿಗಣ್ಯ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪಥ ಗುರುತಿಸಬೇಕೆಂದು ಅಭಿಪ್ರಾಯಪಟ್ಟರು.


ಇದೇ ವೇಳೆ ಮಾತನಾಡಿದ ಶಿವಲಿಂಗೇಗೌಡ, ಟೋಲ್‌ಗಳಲ್ಲಿ ನಮಗೆ ಗೌರವ ಸಿಗದಿದ್ದರೆ ಊರಿನ ಜನ ಏನೆಂದುಕೊಂಡಾರು? ಜನಪ್ರತಿನಿಧಿಗಳಿಗೆ ಗೌರವ,ಘನತೆ ಇಲ್ಲವೇ? ಪ್ರತ್ಯೇಕ ಪಥ ಮಾಡಲು ಸಾಧ್ಯವಾಗದಿದ್ದರೆ ನಮಗೆ ಕೊಟ್ಟಿರುವ ಪಾಸ್ ಹಿಂದಕ್ಕೆ ಪಡೆಯಿರಿ ಎಂದರು.

Share This Article
Leave a comment