WTC2023 ಫೈನಲ್ ಗೆ ಭಾರತ – ಆಸೀಸ್ ಸರಣಿಯೇ ನಿರ್ಣಾಯಕ

Team Newsnap
1 Min Read
The India-Aussie series is crucial for the WTC2023 final .WTC2023 ಫೈನಲ್ ಗೆ ಭಾರತ – ಆಸೀಸ್ ಸರಣಿಯೇ ನಿರ್ಣಾಯಕ

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಈ ಮೂಲಕ ಫೈನಲ್ ಆಸೆ ಇನ್ನೂ ಜೀವಂತವಾಗಿದೆ.ಕೇರಳದಲ್ಲಿ ಹಕ್ಕಿ ಜ್ವರದ ಭೀತಿ – 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

ಭಾರತ, ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದ ಖುಷಿಯೊಂದಿಗೆ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದೆ . ಆದರೆ ಭಾರತ ಫೈನಲ್ ಖಚಿತ ಪಡಿಸಿಕೊಳ್ಳಬೇಕಾದರೆ ಮುಂದಿನ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ ನಿರ್ಣಾಯಕ ಎನಿಸಿಕೊಂಡಿದೆ.

ಫೈನಲ್ ಲೆಕ್ಕಾಚಾರ ಏನು? :

ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ.

1) ಆಸ್ಟ್ರೇಲಿಯಾ ಒಟ್ಟು 13 ಪಂದ್ಯಗಳಲ್ಲಿ 9 ಜಯ, 1 ಸೋಲು ಮತ್ತು 3 ಡ್ರಾ ಸಾಧಿಸಿ 76.92 ಸರಾಸರಿಯೊಂದಿಗೆ 120 ಅಂಕ ಪಡೆದುಕೊಂಡಿದೆ.

2) ಎರಡನೇ ಸ್ಥಾನದಲ್ಲಿ ಭಾರತವಿದೆ, 8 ಜಯ, 4 ಸೋಲು ಮತ್ತು 2 ಡ್ರಾ ಸಾಧಿಸಿ 58.93 ಸರಾಸರಿಯೊಂದಿಗೆ 99 ಅಂಕ ಸಂಪಾದಿಸಿದೆ.

3) ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾವಿದೆ 11 ಪಂದ್ಯಗಳಿಂದ 54.55 ಸರಾಸರಿಯಲ್ಲಿ 72 ಅಂಕ ಪಡೆದಿದೆ.

4) 4ನೇ ಸ್ಥಾನದಲ್ಲಿ ಶ್ರೀಲಂಕಾವಿದ್ದು 10 ಪಂದ್ಯಗಳಿಂದ 53.33 ಸರಾಸರಿಯಲ್ಲಿ 64 ಅಂಕ ಗಳಿಸಿಕೊಂಡಿದೆ.

5) ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಕ್ರಮವಾಗಿ 5,6,7,8,9ನೇ ಸ್ಥಾನದಲ್ಲಿದೆ. ಈ 5 ತಂಡಗಳು ಬಹತೇಕ ಫೈನಲ್ ರೇಸ್‍ನಿಂದ ಹೊರಬಿದ್ದಿವೆ. ಇದೀಗ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿರುವ ತಂಡಗಳ ನಡುವೆ ಪೈಪೋಟಿ ಇದೆ.

Share This Article
Leave a comment