ಮದುವೆ ಆಗುವುದಾಗಿ ಯುವತಿ ವಂಚಿಸಿದ ಐಎಎಸ್ ಅಧಿಕಾರಿ ವಿರುದ್ದ ಟ್ವಿಟ್ಟರ್ ಮೂಲಕ ದೂರು

Team Newsnap
2 Min Read

ಕಲಬುರಗಿಯ ಮಾಹಾನಗರ ಪಾಲಿಕೆ ಆಯುಕ್ತ , ಐಎಎಸ್ ಅಧಿಕಾರಿ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವ ಗಂಭೀರ ಆರೋಪ ಮಾಡಿದ್ದಾಳೆ.

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರೂ ಸ್ನೇಹಲ್ ಲೋಖಂಡೆ ಮದುವೆಯಾಗುವುದಾಗಿ ನಂಬಿಸಿ ತನ್ನನ್ನು ವಂಚನೆ ಮಾಡಿರುವುದಾಗಿ ಯುವತಿ ಗಂಭೀರವಾಗಿ ಆರೋಪಿಸಿದ್ದಾಳೆ.

ಯುವತಿ ದೆಹಲಿ ಮೂಲದವಳು., ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ ಅವರಿಗೆ ಟ್ವಿಟ್ಟರ್ ಮೂಲಕ ಪತ್ರ ಬರೆದು ಲಗತ್ತಿಸಿದ್ದಾಳೆ.

ಆ ಪತ್ರದಲ್ಲಿ 2017ರ ಬ್ಯಾಚ್‍ನ ಐಎಎಸ್ ಅಧಿಕಾರಿ ಲೋಖಂಡೆಯು ತನ್ನ ಜೊತೆಗೆ ಹೋಟೆಲ್‍ಗಳಲ್ಲಿ ಕಾಲ ಕಳೆದ, ಹೊರಗಡೆ ಸುತ್ತಾಡಿದ, ವಾಟ್ಸಾಪ್‍ಗಳಲ್ಲಿ ಚಾಟ್ ಮಾಡಿದ್ದ ಬಗ್ಗೆ ದಿನಾಂಕ, ಸ್ಥಳ ಸಮೇತ ವಿವರಿಸಿದ್ದಾಳೆ ವಾಟ್ಸಾಪ್ ಚಾಟ್‍ನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಈ ಸಂಬಂಧ ಸ್ನೇಹಲ್ ಲೋಖಂಡೆ ಯುವತಿ ನನಗೆ ಪರಿಚಯವಷ್ಟೇ, ಆದರೆ ಆಕೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಹೀಗಾಗಿ ಯುವತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಯುವತಿ ಬರೆದ ಪತ್ರದಲ್ಲಿರುವ ಆರೋಪಗಳು:

ಯುವತಿಯು ಐಎಎಸ್ ಅಥಿಕಾರಿ ವಿರುದ್ದ ಬೆರೆದ ಪತ್ರದಲ್ಲಿ ಯುಪಿಎಸ್‍ಸಿ ಪರೀಕ್ಷೆ ಬರೆಯುತ್ತಿದ್ದಾಗ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಸ್ನೇಹಲ್ ಲೋಖಂಡೆ ನನ್ನ ಮೇಲೆ ಆಸಕ್ತಿ ತೋರಿಸಿದರು.

ಮೇ 26, 2019ರಂದು ದೆಹಲಿಯಲ್ಲಿ ನನ್ನನ್ನು ಭೇಟಿ ಆಗಿದ್ದ ಸ್ನೇಹಲ್ ಮೂರು ದಿನ ನನ್ನ ಜೊತೆಗೆ ಇದ್ದರಲ್ಲದೇ ನನ್ನ ಮದ್ವೆ ಆಗುವುದಾಗಿ ಮಾತುಕೊಟ್ಟಿದ್ದರು.

ನನ್ನ ಜೊತೆಗೆ ಇರುವ ಸಲುವಾಗಿಯೇ ತರಬೇತಿಗಾಗಿ ದೆಹಲಿಗೆ ಬಂದಿದ್ದ ಸ್ನೇಹಲ್ ಬಸ್ ಮಿಸ್ ಮಾಡ್ಕೊಂಡು ದೆಹಲಿಯಲ್ಲೇ ನನ್ನ ಜೊತೆ ಒಂದು ದಿನ ತಂಗಿದ್ದರು

ನನ್ನ ಹುಟ್ಟುಹಬ್ಬ ಆಚರಿಸಲು ನನ್ನ ತಾಯಿಯ ಅನುಮತಿ ಪಡೆದು ಜುಲೈ 8ರಂದು ಹೌನ್ಜ್ ಖಾಸ್‍ಗೆ ಮಧ್ಯರಾತ್ರಿ ಹೋಗಿದ್ದೆವು.

ಜುಲೈ 20, 2019ರಂದು ನನ್ನನ್ನು ಮದ್ವೆ ಆಗುವುದಾಗಿ ಹೇಳಿದ್ದ ಅವರು, ಕೆ ಜಿ ಮಾರ್ಗ್‍ನಲ್ಲಿರುವ ತನ್ನ ಹಾಸ್ಟೆಲ್‍ಗೆ ಬರುವಂತೆ ಹೇಳಿ ಅಲ್ಲಿ ನಾವಿಬ್ಬರೂ ಒಂದು ರಾತ್ರಿ ಜೊತೆಯಾಗಿ ಕಳೆದಿದ್ವಿ. ಮರು ದಿನ ನನ್ನನ್ನು ಭೇಟಿ ಆಗಿದ್ದ ಅವರು ಐ-ಪಿಲ್ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿದ್ದರು ಎಂದು ಆರೋಪಿಸಿದರು.

ಯುವತಿಯ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಸ್ನೇಹಲ್ ಆ ಯುವತಿಯ ವಿರುದ್ದ ಹೈಕೋಟ್೯ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

Share This Article
Leave a comment