ಕೊರಿಯನ್ ವೀಡಿಯೋ ನೋಡುವ ಹವ್ಯಾಸ : ಖಿನ್ನತೆಯಿಂದ ವಿದ್ಯಾರ್ಥಿನಿ ಆತ್ಮಹತ್ಮೆ

Team Newsnap
1 Min Read
The hobby of watching Korean video: Student suicide from depression

ಬಾಲಕಿಯೊಬ್ಬಳು ಕೊರಿಯನ್ ವೀಡಿಯೋಗಳನ್ನು ವಿಪರೀತವಾಗಿ ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ 16 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.

ಇದನ್ನು ಓದಿ –ಹಿಜಾಬ್ ವಿದ್ಯಾರ್ಥಿಗಳ ಕಿರಿಕ್: ಸೌದಿ, ಪಾಕಿಸ್ತಾನಕ್ಕೆ ಹೋಗ್ಲಿ – ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ : ಖಾದರ್

ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದೇನೆ ಮತ್ತು ನನಗೆ ಗೆಳೆಯರು ಯಾರೂ ಇಲ್ಲ. ಅಲ್ಲದೆ, ಕೊರಿಯನ್ ಮ್ಯೂಸಿಕ್ ವಿಡಿಯೊಗಳನ್ನು ವಿಪರೀತವಾಗಿ ನೋಡುತ್ತಿದ್ದೇನೆ. ಅದರಿಂದ ಹೊರಬರಲಾಗುತ್ತಿಲ್ಲ ಎಂದು ವಿದ್ಯಾರ್ಥಿನಿ ಡೆತ್‍ನೋಟ್‍ನಲ್ಲಿ ಬರೆದಿದ್ದಾಳೆ.

10ನೇ ತರಗತಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಈಕೆ ಖಿನ್ನತೆಗೆ ಜಾರಿದ್ದಳು. ಮನೆಯಲ್ಲೇ ಓದಲೆಂದು ಕೊಠಡಿಯನ್ನು ಬಂದ್ ಮಾಡುತ್ತಿದ್ದಳು. ಓದಲೆಂದು ಬಾಗಿಲು ಹಾಕಿಕೊಂಡಿದ್ದ ವಿದ್ಯಾರ್ಥಿನಿ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಆ ಬಾಲಕಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಕ್ಕೆ ಪೂರಕವಾಗಿ ಬಾಲಕಿ ಬರೆದಿರುವ ಡೆತ್‍ನೋಟ್ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a comment