ಜೆಡಿಎಸ್ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ದೇವೇಗೌಡ ಅವರಿಗಾಗಿ ರಾಜ್ಯ ಸರ್ಕಾರವು 60 ಲಕ್ಷ ಮೌಲ್ಯದ ಹೊಸ ವೋಲ್ವೋ ಕಾರು ಒದಗಿಸಿದೆ.
ರಾಜ್ಯಸಭೆ ಸದಸ್ಯರಾದ ಬಳಿಕ ಕಾರು ಒದಗಿಸುವಂತೆ ದೇವೇಗೌಡ ಮಾಡಿದ್ದ ಮನವಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅನುಮೋದಿಸಿ ಈ ಕಾರು ಸರ್ಕಾರದ ಹೆಸರಿನಲ್ಲಿ ಖರೀದಿಸಿದ್ದಾರೆನ್ನಲಾಗಿದೆ.
ಈ ಕಾರಿನ ಮೂಲ ಬೆಲೆ ೫೯.೯೦ ಲಕ್ಷವಾಗಿದ್ದು, ತೆರಿಗೆ, ವಿಮೆಯ ಮೊತ್ತ ಸೇರಿದರೆ ೭೪.೯೦ ಲಕ್ಷವಾಗುತ್ತದೆ. ಆದರೆ ಇದನ್ನು ಸರ್ಕಾರದ ಮೂಲಕ ಖರೀದಿ ಮಾಡಿರುವದರಿಂದ ತೆರಿಗೆ ಇದಕ್ಕೆ ಬೀಳುವದಿಲ್ಲ. ಇದರ ಒಟ್ಟು ಬೆಲೆ ೬೦ ರಿಂದ ೬೫ ಲಕ್ಷವಾಗಬಹುದು. ಈ ಕಾರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯ ಹೆಸರಿನಲ್ಲಿ ಖರೀದಿ ಮಾಡಲಾಗಿದೆ ಎಂದು ಹೇಳಲಾಗಿದೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು