ಡಿಜಿಟಲ್ ಕ್ರಾಂತಿಗೆ ಉದ್ಯಮಿ ಹೊಂದಿಕೊಳ್ಳಬೇಕು: ಡಿಸಿ ಡಾ.ಬಗಾದಿ ಅಭಿಮತ

Team Newsnap
1 Min Read

ಡಿಜಿಟಲ್ ಕ್ರಾಂತಿಗೆ ಪ್ರತಿಯೊಬ್ಬ ಉದ್ಯಮಿಯೂ ಹೊಂದಿಕೊಳ್ಳಬೇಕಾಗಿದೆ. ಡಿಜಿಟಲೈಸ್ ಆಗದಿದ್ದರೆ ನೀವು ಹಿಂದುಳಿದಿದ್ದೀರಿ ಎಂದೇ ಅರ್ಥ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಭಿಪ್ರಾಯಪಟ್ಟರು.

bagadi1


ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಗುರುವಾರ ನಡೆದ ವಾಣಿಜ್ಯ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೇವಾ ವಲಯದಲ್ಲಿ ಮೈಸೂರು ಜಿಲ್ಲೆ ಉತ್ತಮ ಸ್ಥಿತಿಯಲ್ಲಿದೆ. ದೇಶದ ಆರ್ಥಿಕತೆಯಲ್ಲಿ ರಫ್ತಿನದು ಮಹತ್ತರ ಪಾತ್ರವಿರುವುದರಿಂದ ಸರಕು ರಫ್ತಿನಲ್ಲೂ ಉತ್ತಮ ಸ್ಥಾನ ಹೊಂದಬೇಕಾಗಿದೆ ಎಂದರು.
ಮೈಸೂರಿನಲ್ಲಿ ಇನ್ಫೋಸಿಸ್, ವಿಪ್ರೊ, ಟಿವಿಎಸ್ ಸಂಸ್ಥೆಗಳು ವಿಶ್ವಮಾನ್ಯತೆ ಗಳಿಸಿ ಸೇವೆ ಒದಗಿಸುತ್ತಿವೆ. ಅದೇ ರೀತಿ ಸರಕು ಸೇವೆಯೂ ತನ್ನ ವಹಿವಾಟನ್ನು ಜಗತ್ತಿನಾದ್ಯಂತ ಪಸರಿಸಬೇಕಿದೆ. ಇದಕ್ಕೆ ಸರ್ಕಾರ, ಜಿಲ್ಲಾಡಳಿತ ಉತ್ತೇಜನ ನೀಡಲಿದೆ ಎಂದು ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದರು.


ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಕೆ.ಲಿಂಗರಾಜು ಮಾತನಾಡಿ, ಸೇವಾ ವಲಯದಲ್ಲಿ ಬೆಂಗಳೂರಿನ ನಂತರ ಮೈಸೂರು 2 ನೇ ಸ್ಥಾನದಲ್ಲಿದೆ. ಸರಕು ಸೇವಾ ವಹಿವಾಟಿನಲ್ಲಿ ರಾಜ್ಯದಲ್ಲೇ 4 ನೇ ಸ್ಥಾನದಲ್ಲಿದೆ.2020 ನೇ ಸೆಪ್ಟೆಂಬರ್‌ನಿAದ 2021 ರ ಮಾರ್ಚ್ ವರೆಗೆ ಜಿಲ್ಲೆಯಿಂದ 2,914 ಕೋಟಿರೂ. ಸರಕು ಸೇವಾ ವಹಿವಾಟು ನಡೆಸಿದೆ ಎಂದು ವಿವರಿಸಿದರು.

bagadi m


ಮೈಸೂರಿನಲ್ಲಿ ಸುಮಾರು 157 ಘಟಕಗಳಿಂದ ಅಮೆರಿಕ, ಜರ್ಮನಿ, ವಿಯಟ್ನಾಂ, ಅರಬ್ ರಾಷ್ಟ್ರ ಸೇರಿದಂತೆ ಸುಮಾರು 63 ದೇಶಗಳಿಗೆ ನಾನಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ.


ಪ್ರತಿ ಜಿಲ್ಲೆಯನ್ನು ಎಕ್ಸ್ಪೋರ್ಟ್ಹಬ್ ಮಾಡಬೇಕೆಂಬುದು ಪ್ರಧಾನಿಗಳ ಮಹಾದಾಸೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕೇಂದ್ರದ ಕಮಿಟಿ ರಚಿಸಲಾಗಿದೆ. 5-6 ಕೋಟಿರೂ. ವೆಚ್ಚದಲ್ಲಿ ಎಕ್ಸ್ಪೋರ್ಟ್ ಹೌಸ್ ನಿರ್ಮಾಣವಾಗುತ್ತಿದೆ. ಸದ್ಯದಲ್ಲೇ ಅದು ಪೂರ್ಣಗೊಂಡು ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಗೋಪಿನಾಥ ಶಾಸ್ತ್ರೀ, ಮೈಸೂರು ಕೈಗಾರಿಕಾ ಸಂಘದಿಂದ ಸುರೇಶ್ ಕುಮಾರ್ ಜೈನ್ ಮತ್ತಿತರ ಪ್ರಮುಖರು ಸಭೆಯಲ್ಲಿ ಇದ್ದರು.

Share This Article
Leave a comment