ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ ಇಂದಿಗೆ ಐದು ದಿನಗಳಾದ ಹಿನ್ನೆಲೆಯಲ್ಲಿ ಮಂಗಳವಾರಅಪ್ಪು ಕುಟುಂಬಸ್ಥರು ಭಾರದ ಮನಸ್ಸಿನಿಂದ ಪುನೀತ್ ಸಮಾಧಿ ಬಳಿ ಹಾಲು ತುಪ್ಪ ಕಾರ್ಯವನ್ನು ನೆರವೇರಿಸಿದರು.
ಕಂಠೀರವ ಸ್ಟುಡಿಯೋದಲ್ಲಿ
ಪುನೀತ್ ಅವರ ಮಾವ ಗೋವಿಂದ್ ರಾಜು ಮುಂದಾಳತ್ವದಲ್ಲಿ ಹಾಲು ತುಪ್ಪ ಕಾರ್ಯ ನಡೆಸಲಾಗಿದೆ.
ಈ ಕಾರ್ಯಕ್ಕೆ ಕೇವಲ ದೊಡಮ್ಮನೆ ಸದಸ್ಯರು ಹಾಗೂ ಚಿತ್ರರಂಗದ ಕೆಲ ಗಣ್ಯರಿಗೆ ಮಾತ್ರ ಆವಕಾಶ ಕಲ್ಪಿಸಲಾಗಿತ್ತು.
ಇನ್ನು ಪುನೀತ್ ಕುಟುಂಬ ಸೇರಿದಂತೆ ಪತ್ನಿ ಆಶ್ವಿನಿ ಹಾಗೂ ಅವರ ಮಕ್ಕಳು ಪುನೀತ್ ಸಮಾಧಿಗೆ ಹಾಲು ತುಪ್ಪವನ್ನು ಬಿಟ್ಟಿದ್ದಾರೆ. ದೊಡ್ಮೆನೆ ಕುಟುಂಬದೊಂದಿಗೆ ವಿಜಯ್ ರಾಘವೇಂದ್ರ, ಶ್ರೀ ಮುರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗಲು ಪುನೀತ್ ನಿವಾಸದಿಂದ ಮೂರು ಬಸ್ಗಳಲ್ಲಿ ಆಪ್ತರು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದರು. ಹಾಲು-ತುಪ್ಪ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪುನೀತ್ ಸಮಾಧಿಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು