ಮಂಡ್ಯದ ಕೇಂದ್ರೀಯ ಶಾಲೆಯ ಶಿಥಿಲಾವಸ್ಥೆ: ಹೊಸ ಕಟ್ಟಡ ನಿರ್ಮಿಸಿ – ಅಧಿವೇಶನದಲ್ಲಿ ಸಂಸದೆ ಒತ್ತಾಯ

Team Newsnap
1 Min Read

ಲೋಕ ಸಭೆಯ ಅಧಿವೇಶನದಲ್ಲಿ‌ ತಮಗೆ ಸಿಗುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಮಂಡ್ಯ ಸಂಸತ್ ಕ್ಷೇತ್ರದ ಸಮಸ್ಯೆ ಗಳನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ಸಂಸದೆ ಸುಮಲತಾ ಒಂದು ಹೆಜ್ಜೆ ಮುಂದಿದ್ದಾರೆ.

ಇದೇ ಅಧಿವೇಶನದಲ್ಲಿ‌ ಜಿಲ್ಲೆಯಲ್ಲಿ‌ ಹೆಚ್ಚಿರುವ ಅಕ್ರಮ ಗಣಿಗಾರಿಕೆ ಯಿಂದ ಕೆ ಅರ್ ಎಸ್ ಆಣೆಕಟ್ಟೆಗೆ ಅಪಾಯ ಹಾಗೂ ಪರಿಸರ ಮಾಲಿನ್ಯ ದಿಂದ ಆಗುವ ಪರಿಣಾಮಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು.
ಅಲ್ಲದೇ ನೆನಗುದಿಗೆ ಬಿದ್ದಿರುವ ಹೆಜ್ಜಾಲ – ಚಾಮರಾಜನಗರ ರೇಲ್ವೆ ಯೋಜನೆಗೆ ಚುರುಕು ಮುಟ್ಟಿಸುವುದು ಯಾವಾಗ ಎಂದು ರೇಲ್ವೆ ಮಂತ್ರಿ ಗಳನ್ನು ಅಧಿವೇಶನದಲ್ಲಿ ಪ್ರಶ್ನೆ ಮಾಡಿ ಗಮನಸೆಳೆದಿದ್ದರು ಸಂಸದೆ ಸುಮಲತಾ.

ಕೇಂದ್ರೀಯ ಶಾಲೆಗೆ ಹೊಸ ಕಟ್ಟಡ ಬೇಕು:

ಈಗ ಮಂಡ್ಯದ ಕೇಂದ್ರೀಯ ವಿದ್ಯಾಲಯ ಕಟ್ಟಡದ ಶೀಥಿಲ ಸ್ಥಿತಿಯ ಬಗ್ಗೆ ಗಮನ ಸೆಳೆದ್ದಾರೆ. 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾ ಅಭ್ಯಾಸ ಮಾಡುವ ಕೇಂದ್ರೀಯ ಶಾಲೆ ಕಟ್ಟಡ ತೀರಾ ಅಪಾಯಕಾರಿ ಪರಿಸ್ಥಿತಿಯಲ್ಲಿ ಇದೆ ಎಂದು ವಿವರಿಸಿದ್ದಾರೆ.
ಕೆಲವೊಮ್ಮೆ ಮಕ್ಕಳು ಕ್ಲಾಸ್ ರೂಂ ನಿಂದ ಮರದ ಕೆಳಗೆ ಕುಳಿತು ಪಾಠ ಕೇಳುತ್ತಾರೆ. ಮರ ಗಿಡಗಳು ಹೆಚ್ಚಾಗಿವೆ. ಹೀಗಾಗಿ ಹಾವೂ ಸೇರಿದಂತೆ ಇತರ ಅಪಾಯಕಾರಿ ಹುಳುಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಶಾಲಾ ಕಟ್ಟಡಗಳನ್ನು ಹೊಸದಾಗಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸುಮಲತಾ ಒತ್ತಾಯಿಸಿದರು.

Share This Article
Leave a comment