February 22, 2026

Newsnap Kannada

The World at your finger tips!

AMITHAB

ಆರೋಗ್ಯದಲ್ಲಿ ವ್ಯತ್ಯಾಸ:’ಬಿಗ್ ಬಿ’ ಗೆ ಸರ್ಜರಿ – ಬ್ಲಾಗ್ ನಲ್ಲಿ ಮಾಹಿತಿ

Spread the love

ಬಾಲಿವುಡ್‌ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ.

ಸರ್ಜರಿ ಮಾಡಿಸುವ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬಿಗ್ ಬಿ ದೃಢಪಡಿಸಿದ್ದಾರೆ.

ನನ್ನ‌ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ ಸರ್ಜರಿ.. ಈಗೇನೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಅವರಿಗೆ ಈಗಾಗಲೇ ಸರ್ಜರಿ ಆಗಿದೆಯಾ? ಮುಂದೆ ಆಗಲಿದೆಯಾ ಎಂಬ ಬಗ್ಗೆ ನಿರ್ದಿಷ್ಟ ವಾಗಿ ಏನೂ ಹೇಳಿಲ್ಲ. ಆದರೆ ಶೀಘ್ರವೇ ಗುಣಮುಖರಾಗಿ ಎಂದು ಅಭಿಮಾನಿಗಳು ಮಾತ್ರ ಹಾರೈಸಿದ್ದಾರೆ.

ತಮ್ಮ ಆರೋಗ್ಯದ ಈಗಿನ ಸ್ಥಿತಿ ಬಗ್ಗೆ ಹೇಳಿಕೊಂಡಿರುವ ಅಮಿತಾಬ್​ ಬಚ್ಚನ್​ ಕಳೆದ ವರ್ಷ ಕೊವಿಡ್​-19 ಸೋಂಕಿಗೆ ಒಳಗಾಗಿ‌ ಗುಣಮುಖರಾಗಿದ್ದರು. 2019ರಲ್ಲಿ ಲಿವರ್​ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂಬುದನ್ನು ಸ್ಮರಿಸಬಹುದು.

error: Content is protected !!