December 27, 2024

Newsnap Kannada

The World at your finger tips!

muskan 1

ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಕಾನ್ ಕುಟುಂಬದ ವಿರುದ್ಧ ದೂರು ನೀಡಲು ನಿರ್ಧಾರ

Spread the love

ಮಂಡ್ಯದ PES ಪದವಿ ಪೂರ್ವ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಮತ್ತು ಕುಟುಂಬದ ವಿರುದ್ಧ NIA (ಕೇಂದ್ರೀಯ ತನಿಖಾ ದಳ) ತನಿಖೆ ನಡೆಸುವಂತೆ ಒತ್ತಾಯಿಸಿ ಅನಂತ ಕುಮಾರ್ ಅಭಿಮಾನಿಗಳ ಸಂಘವು ಒತ್ತಾಯಿಸಿದೆ.

ಈ ಕುರಿತಂತೆ ಸಂಘದ ಅನಿಲ್ ಮಂಡ್ಯ ಜಿಲ್ಲೆಯ ಎಸ್‌ಪಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಭಾರತದ ಆತಂರಿಕ ಭದ್ರತೆಗೆ ಅಪಾಯವಿದ್ದು, ಮುಸ್ಕಾನ್ ಕುಟುಂಬದ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಅನಿಲ್ ಒತ್ತಾಯಿಸುವುದಾಗಿ ಹೇಳಿದ್ದಾರೆ

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ವಿದ್ಯಾರ್ಥಿನಿಗೆ ಹಲವಾರು ಮುಸ್ಲಿಂ ಮುಖಂಡರು ಹಣ, ಹುಡುಗೊರೆ ನೀಡಿ ವಿದ್ಯಾರ್ಥಿನಿಯನ್ನು ಬೆಂಬಲಿಸಿದ್ದಾರೆ. ಹೊರ ರಾಜ್ಯದವರೂ ಶಹಬ್ಬಾಸ್ ಗಿರಿ ನೀಡಿದ್ದಾರೆ. ಈ ನಡುವೆ ಆಲ್‌ಖೈದಾ ಸಹ ಬೆಂಬಲ ವ್ಯಕ್ತಪಡಿಸಿದ್ದು, ಇದರ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿದೆ ಎನ್ನುವ ಆತಂಕ ಶುರುವಾಗಿದೆ. ಇದನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶರು ಸಹ ಆಲ್‌ಖೈದಾ ಪ್ರಸಂಶೆಯ ಹಿಂದೆ ದೊಡ್ಡ ಷಡ್ಯಂತರ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇದು ದೇಶದ ಆಂತರಿಕ ಭದ್ರತೆಯ ವಿಚಾರ ಆಗಿರುವುದರಿಂದ ಇದನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು. ಮುಸ್ಕಾನ್ ಕುಟುಂಬದವರ ಪಾಸ್‌ ಪೋರ್ಟ್‌ ಇದ್ದಲ್ಲಿ ವಶಪಡಿಸಿಕೊಂಡು ಅವರು ದೇಶದಿಂದ ಹೊರ ಹೋಗದಂತೆ ನೋಡಿಕೊಳ್ಳಬೇಕು. ಜೊತೆಗೆ ಅವರನ್ನು ಪ್ರಸಂಶಿಸಿದ ಮುಖಂಡರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!