22 ವರ್ಷದ ನಂತರ ತಾಯಿ ಮಡಿಲನ್ನು ಮಗಳು ಸೇರಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಅಂಜಲಿ ಎಂಬಾಕೆ 22 ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಮಗಳು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
9 ವರ್ಷ ವಯಸ್ಸಿನಲ್ಲಿ ಅಂಜಲಿ ನಾಪತ್ತೆಯಾಗಿದ್ದರು. ನಂತರ ಅವರು ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಕೇರಳದ ನೆಲ್ಲಮಣಿಯಲ್ಲೇ ಸಾಜಿಯೊಂದಿಗೆ ಅಂಜಲಿ ವಿವಾಹವಾಗಿ ಜೀವನ ಸಾಗಿಸುತ್ತಿದ್ದರು.
ಈ ನಡುವೆ ಅಂಜಲಿಗೆ ತಾಯಿಯ ನೆನಪು ಬಹಳ ಕಾಡಿದೆ. ಇದರಿಂದಾಗಿ ಕಳೆದ 3 ವರ್ಷದಿಂದ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ.
ಮಂಗಳೂರಿನ ಫಿಶ್‍ಮೋಣು, ಮುಸ್ತಾಫರ ಬಳಿ ಅಂಜಲಿ ಹಾಗೂ ಪತಿ ಸಾಜಿ ಹೇಳಿಕೊಂಡಿದ್ದರು. ಮೂಡಿಗೆರೆ ಸುತ್ತಮುತ್ತ ಅಂಜಲಿ ತಾಯಿಗಾಗಿ ಹುಡಕಾಟ ನಡೆಸಿದ್ದಾರೆ. ಕೊನೆಗೂ ಮೂಡಿಗೆರೆಯ ಮುದ್ರೆ ಮನೆಯಲ್ಲಿ ಅಂಜಲಿ ತಾಯಿ ಪತ್ತೆಯಾಗಿದ್ದಾರೆ.
ಅಂಜಲಿ ತಾಯಿಯನ್ನು ಹುಡುಕುತ್ತಾ ಮೂಡಗೆರೆಯ ಮುದ್ರೆ ಮನೆಗೆ ಹೋಗಿದ್ದಾರೆ. ಈ ವೇಳೆ ಅವರ ತಾಯಿ ಅಲ್ಲಿಯೇ ಕೆಲಸ ಮಾಡುತ್ತಿರುವ ವಿಷಯ ತಿಳಿದಿದೆ. ತಾಯಿ ಬರುತ್ತಿರುವುದನ್ನು ನೋಡಿದ ತಕ್ಷಣ ಅಂಜಲಿ ಓಡಿ ಹೋಗಿ ತಾಯಿಯನ್ನು ತಬ್ಬಿಕೊಂಡು ಕಣ್ಣಿರಿಟ್ಟು ಯೊಗ ಕ್ಷೇಮವನ್ನು ವಿಚಾರಿಸಿದ್ದಾರೆ.
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
More Stories
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ