May 26, 2022

Newsnap Kannada

The World at your finger tips!

cid a

PSI ಪರೀಕ್ಷೆಯಲ್ಲಿ ಅಕ್ರಮ​: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಕುತ್ತಿಗೆ ಪಟ್ಟಿ ಹಿಡಿದು ತಂದ CID

Spread the love

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಈಗ ಕೇಸ್​ ಸಂಬಂಧ ಮತ್ತೊಬ್ಬ ಆರೋಪಿ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಬಂಧಿಸಲಾಗಿದೆ.

ಮಹಾಂತೇಶ್ ಕುತ್ತಿಗೆ ಪಟ್ಟಿ ಹಿಡಿದು ಸಿಐಡಿ ಟೀಂ ಕರೆ ತಂದಿದೆ. ಆಗ ಮಹಾಂತೇಶ್ ಪಾಟೀಲ್ ಎಂಬಾತನನ್ನು ಬಂಧಿಸಬೇಡಿ ಎಂದು ಬೆಂಬಲಿಗರು ಭಾರೀ ಹೈಡ್ರಾಮಾ ಮಾಡಿದ್ದಾರೆ. ಬಂಧಿಸಿ ಕರೆ ತರುವ ವೇಳೆ ಸಿಐಡಿ ಅಧಿಕಾರಿಗಳಿಗೆ ಆವಾಜ್ ಕೂಡ ಹಾಕಲಾಗಿದೆ.

ಅಜ್ಞಾತ ಸ್ಥಳದಿಂದ ಸಿಐಡಿ ಅಧಿಕಾರಿಗಳಿಗೆ ಕರೆ ಮಾಡಿ ಧಮ್ಕಿಯೂ ನೀಡಲಾಗಿದೆ. ನನ್ನ ಸಹೋದರನನ್ನು ಯಾಕೆ ಬಂಧಿಸಿದ್ದೀರಿ? ಎಂದು ಪ್ರಶ್ನಿಸಿರೋ ಮಹಾಂತೇಶ್​​ ಸಹೋದರ ಆರ್​.ಡಿ ಪಾಟೀಲ್ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಆವಾಜ್​ ಹಾಕಿದ್ದಾರೆ.

error: Content is protected !!