November 16, 2024

Newsnap Kannada

The World at your finger tips!

oil,central govt,price

ಖಾದ್ಯ ತೈಲ ಬೆಲೆ ಇಳಿಕೆ ಮಾಡಿದ ಕೇಂದ್ರ ಸಕಾ೯ರ

Spread the love

ಗೃಹಿಣಿಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೊಂದು ಗಿಫ್ಟ್ ಸಿಕ್ಕಿದೆ. ಅಡುಗೆಗೆ ಬಳಸುವ ಖಾದ್ಯ ತೈಲದ ಬೆಲೆಯನ್ನು ಕೇಂದ್ರ ಸಕಾ೯ರ ಇಳಿಕೆ ಮಾಡಿದೆ

ದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿದೇ೯ಶಕರು, ತಾಳೆ ಎಣ್ಣೆ, ಕಡಲೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸೋಯಾ ಎಣ್ಣೆಗಳ ಬೆಲೆಗಳನ್ನು ಸ್ಲಾಬ್‍ಗಳ ಆಧಾರದಲ್ಲಿ ಇಳಿಕೆ ಮಾಡುವುದಾಗಿ ತಿಳಿಸಿದೆ.

ಎಣ್ಣೆ ಬೀಜಗಳ ಪೂರೈಕೆ ಹೆಚ್ಚಳವಾಗಿರುವುದು, ಡೀಸೆಲ್ ಬೆಲೆಗಳು ಇಳಿಕೆ ಆಗಿರುವುದು ಖಾದ್ಯ ತೈಲಗಳ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಹಿಂದೆಂದು ಇಲ್ಲದ ರೀತಿಯಲ್ಲಿ ಖಾದ್ಯ ತೈಲದ ಬೆಲೆ ಶೇಕಡಾ 62 ರಷ್ಟು ಹೆಚ್ಚಳ ಕಂಡಿತ್ತು.

ಕಳೆದ ಜನವರಿಯಲ್ಲಿ 90 ರೂಪಾಯಿಗೆ ಲೀಟರ್ ಪಾಮ್ ಆಯಿಲ್ ಸಿಗುತ್ತಿತ್ತು. ನಂತರ ಅದು 150 ರೂಪಾಯಿವರೆಗೂ ಮುಟ್ಟಿತ್ತು. ಇತ್ತೀಚಿಗೆ ಇಳಿಕೆ ಹಾದಿಯಲ್ಲಿತ್ತು. ಸದ್ಯ 125 ರೂಪಾಯಿಗೆ ಅದು ಸಿಗುತ್ತಿದೆ. ಸೂರ್ಯಕಾಂತಿ ಎಣ್ಣೆ ಬೆಲೆ 180 ರೂಪಾಯಿ ಆಗಿತ್ತು. ಸದ್ಯ ಅದರ ಬೆಲೆ 140 ರೂಪಾಯಿಯಿದೆ.

ಈಗ ಕೇಂದ್ರ ಸರ್ಕಾರ ಖಾದ್ಯ ತೈಲ ಬೆಲೆಗಳನ್ನು ಇಳಿಸುವ ಕಾರಣ ಇದು ಮತ್ತಷ್ಟು ಇಳಿಯಲಿದೆ.

Copyright © All rights reserved Newsnap | Newsever by AF themes.
error: Content is protected !!