ಪಕ್ಷಕ್ಕೆ ಬರೋರಿದ್ದಾರೆ, ಬೇಡ ಅನ್ನಲ್ಲ – ಸಂಚಲನ ಮೂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ

Team Newsnap
1 Min Read

ಪಕ್ಷಕ್ಕೆ ಬರೋರಿದ್ದಾರೆ, ಬೇಡ ಅನ್ನಲ್ಲ ಎನ್ನುವ ಸಂಚಲನ ಮೂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಯು ಮಾಜಿ ಸಚಿವ ಯೋಗೇಶ್ವರ್ ಕುರಿತಾಗಿ ಇರಬಹುದೇ ಎಂಬ ಚಚೆ೯ ನಡೆಯುತ್ತಿದೆ.

ಬಿಜೆಪಿಗೆ ಗುಡ್ ಬೈ ಹೇಳಲು ತುದಿಗಾಲಿನಲ್ಲಿ ನಿಂತಿರುವ ಮಾಜಿ ಸಚಿವ ಯೋಗೇಶ್ವರ್ ಕಾಂಗ್ರೆಸ್ ಸೇರಲು ತಯಾರಿ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಗಳು ಲಭ್ಯವಾಗುತ್ತಿದೆ

ಡಿಕೆಶಿ ಹಾಗೂ ಡಿ.ಕೆ.ಸುರೇಶ್​ ಸಿ.ಪಿ.ಯೋಗೇಶ್ವರ್​​ ಅವರನ್ನು ಭೇಟಿಯಾಗಿದ್ದಾರಂತೆ. ಈ ಬಗ್ಗೆ ಮಾತುಕತೆ ಕೂಡ ನಡೆದಿದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್​ ಸೇರಲು ಖುದ್ದು ಸಿಪಿ ಯೋಗೇಶ್ವರ್ ಅವರೇ ಉತ್ಸುಕರಾಗಿದ್ದಾರೆ. ಬಿಜೆಪಿಯಲ್ಲಿನ ಇತ್ತೀಚೆಗಿನ ಬೆಳವಣಿಗೆಗಳಿಂದ ಬೇಸರಗೊಂಡು ಕಾಂಗ್ರೆಸ್ ಸೇರಲಿದ್ದಾರಂತೆ. ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನದ ನಿರೀಕ್ಷೆ ಹೊಂದಿದ್ದ ಸಿಪಿವೈಗೆ ಭಾರೀ ನಿರಾಸೆ ಆಗಿದೆ. ಹೀಗಾಗಿ ಕಾಂಗ್ರೆಸ್​ ಕೈಹಿಡಿದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೈಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿಯಲಿದ್ದಾರೆಂಬ ಮಾತುಗಳು ಕೇಳಿಬಂದಿವೆ.

ಹೆಚ್​ಡಿಕೆ ಕಟ್ಟಿಹಾಕಲು ಪ್ಲಾನ್ ರೂಪಿಸಿರುವ ಡಿ.ಕೆ ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶ್ವರ್ ಹಾವು ಮುಂಗೂಸಿಯಂತೆ ಕಿತ್ತಾಡಿದ್ದರೂ ಇವರಿಬ್ಬರು ಮತ್ತೆ ಒಂದಾಗುತ್ತಿದ್ದಾರೆ ಅನ್ನೋ ಗುಸುಗುಸು ರಾಜಕೀಯ ವಲಯದಲ್ಲಿ ಶುರುವಾಗಿದೆ.

ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಬಗ್ಗು ಬಡಿಯಲು ಒಂದಾಗುತ್ತಾರಂತೆ ಅನ್ನೋ ಚರ್ಚೆ ಜೋರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಪಿವೈಯನ್ನು ಬಿಜೆಪಿಯಿಂದ ಸೆಳೆಯಲು ಡಿಕೆ ಶಿವಕುಮಾರ್​ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಡಿಕೆಶಿ ಹೇಳುವುದು ಏನು?

ಕೆಲವರು ಪಕ್ಷಕ್ಕೆ ಬರೋರಿದ್ದಾರೆ, ಬೇಡ ಅನ್ನಲ್ಲ. ನನ್ನ ಹೇಳಿಕೆಯಿಂದ
ಕೆಲವರು ಪಕ್ಷಕ್ಕೆ ಬರುವವರು ಇದ್ದಾರೆ, ನಾನು ಬೇಡ ಅನ್ನುವುದಿಲ್ಲ. ಕೆಲವರು ನನಗೆ ಆಗದೇ ಇರಬಹುದು. ಕೆಲವರು ಬೇರೆಯವರಿಗೆ ಆಗದೇ ಇರಬಹುದು. ಆದರೆ ಇದೆಲ್ಲ ವೈಯುಕ್ತಿಕವಾಗಿಲ್ಲ, ಪಾರ್ಟಿ ಅಂತ ನೋಡುತ್ತೇವೆ.

ಡಿ.ಕೆ.ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ

Share This Article
Leave a comment