
ಇಂತು ಬರಿದಾಗಿಸಿದರೆ ವಸುಧೆ
ಒಡಲು
ನಾಳೆಗೇನಿದೆ ಹೇಳು ನೀ ಬಾಳಿ
ಬದುಕಲು
ಬಾಳ್ವೆಯ ಹಕ್ಕಿದೆ ಸಕಲ ಜೀವ
ರಾಶಿಗೆ
ಮರಗಿಡ ಪ್ರಾಣಿಗಳೇ ಮುಕುಟ
ಪ್ರಕೃತಿಗೆ
ನೀನಿದ ಮರೆಯುವುದು ತರವೇ
ಮರುಳ
ಸ್ವಾರ್ಥ ಸರಿಸಿ ಪರಿಸರವ ಪೊರೆ
ದುರುಳ
ನಳನಳಿಪ ಹಸಿರಿನಲಿ ನಿನ್ನುಸಿರು
ಅಡಗಿದೆ
ಹಸಿರ ನಾಶ ವಿನಾಶಕೆ ಹಾದಿಯ
ತೋರಿದೆ
ಅನ್ನ ನೀರು ಗಾಳಿ ಬೆಳಕೀಯುವ
ಪರಿಸರವು
ಹೆತ್ತಬ್ಬೆಗೂ ಮಿಗಿಲು ಇದು ಪರಮ
ಸತ್ಯವು
ಅನ್ನವಿತ್ತ ಒಡಲ ಅರಿದೆಯಾದರೆ
ನೀನು
ಕ್ಷಮಿಸನು ನಮ್ಮನು ಕಾಯುವ ಆ
ದೇವನು
ನಿನ್ನ ಸಂತತಿಗೆ ಕೂಡಿಟ್ಟರೆ ಸಾಲದು
ಸಂಪತ್ತನ್ನು
ಬಾಳಿ ಬದುಕಲು ನೀನುಳಿಸಬೇಕು
ಹಸಿರು ಹೊನ್ನು
ನೀನಗಿದ್ದರೆ ನಾ ನಿನಗೆ ಎಂಬುದನು
ಅರಿತು
ಮುಂದೆ ಸಾಗುವ ಪ್ರಕೃತಿಯೊಂದಿಗೆ
ಕಲೆತು