ಬಿಗಡಾಯಿಸಿದ ಸಾರಿಗೆ ನೌಕರರ ಮುಷ್ಕರ – ನಿಲ್ಲದ ಪ್ರಯಾಣಿಕರ ಪರದಾಟ

Team Newsnap
1 Min Read
Free bus pass - only up to 50 K.M from home ? ಉಚಿತ ಬಸ್ ಪಾಸ್ - ಮನೆಯಿಂದ 50 K.M ವರೆಗೆ ಮಾತ್ರ ?

ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಒತ್ತಾಯಿಸಿ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ನೌಕರರ ‌ಮುಷ್ಕರ ಎರಡನೇ ದಿನವಾದ ಶನಿವಾರ ಕೂಡ ಮುಂದುವರೆದಿದೆ.

ನೌಕರರ ಈ ಮುಷ್ಕರದಿಂದಾಗಿ ಇಡೀ ರಾಜ್ಯದ ಸಾರಿಗೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಪ್ರಯಾಣಿಕರು ಪರದಾಟವಂತೂ ಹೇಳತೀರದ್ದಾಗಿದೆ.

ಸಾರಿಗೆ ನೌಕರರ ಮುಷ್ಕರದಿಂದ ಆಗಿರುವ ತೊಂದರೆಗಳು….

1) ಬೆಂಗಳೂರಿನಲ್ಲಿ ಈ ಮುಷ್ಕರ ದಿಂದಾಗಿ ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ಸ್ಟ್ಯಾಂಡ್ , ಯಶವಂತ ಪುರ, ಶಿವಾಜಿನಗರ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳು ಪ್ರಯಾಣಿಕರು ಹಾಗೂ ಬಸ್ ಗಳಿಲ್ಲದೇ ಬಿಕೋ ಎನ್ನುತ್ತವೆ.

2)ಬೆಂಗಳೂರಿನ ಕೆಲವು ಕಡೆ ಮಾತ್ರ ಪೋಲಿಸ್ ರಕ್ಷಣೆ ಯಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

3) ಆಟೋ ಪ್ರಯಾಣ ದರ ಹೆಗ್ಗಾಮುಗ್ಗಾ ಏರಿಸಿ ಪ್ರಯಾಣಿಕರಿಂದ ಸುಲಿಗೆ, ಹಗಲು ದರೋಡೆ ಮಾಡಲಾಗುತ್ತದೆ.

4) ಬೆಂಗಳೂರಿನಲ್ಲಿ ಮೆಟ್ರೋ ರೈಲಿನ ಸಂಚಾರವನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಸ್ವಲ್ಪ ತೊಂದರೆ ತಪ್ಪಿದಂತಾಗಿದೆ.‌

5) ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲೂ ಕೂಡ ಸಾರಿಗೆ ನೌಕರರ ಮುಷ್ಕರದ ಬಿಸಿ ಹೆಚ್ಚಾಗಿದೆ. ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ.

ಸಾರಿಗೆ ನೌಕರರಿಗೆ ಎಸ್ಮಾ ಜಾರಿ ?

ನಾಳೆಯೊಳಗೆ ಸಾರಿಗೆ ನೌಕರರು ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಳ್ಳದೇ ಹೋದರೆ ಎರಡು ಪ್ರಮುಖ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಕಡ್ಡಾಯವಾಗಿ ಕೆಲಸ ಕೆಲಸ ಕ್ಕೆ ಹಾಜರಾಗುವಂತೆ ಮಾಡುವುದು.

ರಾಜ್ಯ ವಿವಿದೆಡೆ ಹಾಗೂ ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳ ಸಂಚಾರಕ್ಕೆ ಸಧ್ಯಕ್ಕೆ ಅವಕಾಶ ಮಾಡಿಕೊಟ್ಟು ಜನರಿಗೆ ಅನುಕೂಲ ಮಾಡಿಕೊಡುವುದು

Share This Article
Leave a comment