January 4, 2025

Newsnap Kannada

The World at your finger tips!

chethen 2

ನಟ ಆ ದಿನಗಳು ಚೇತನ್ ಬೆಂಗಳೂರು ಪೊಲೀಸ್​​​​ ವಶಕ್ಕೆ

Spread the love

ಸಾಮಾಜಿಕ ಕಾರ್ಯಕರ್ತ ಮತ್ತು ನಟ ಆ ದಿನಗಳು ಚೇತನ್​ ಅಹಿಂಸಾ ಅವರನ್ನು ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈಗ ಚೇತನ್​​ ಬೆಂಬಲಿಗರು ಶೇಷಾದ್ರಿಪುರಂ ಪೊಲೀಸ್​ ಠಾಣೆ ಮುಂಭಾಗ ಸೇರಿದ್ದಾರೆ.

ಬೆಂಬಲಿಗರು ಚೇತನ್​ ಎಲ್ಲಿದ್ದಾರೆ? ಎಂದು ಕೇಳಿದರೂ ಪೊಲೀಸರು ಏನು ಹೇಳಿತ್ತಿಲ್ಲ ಎನ್ನಲಾಗಿದೆ.

ನ್ಯಾಯಾಧೀಶರಿಗೆ ನಿಂದಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುತ್ತಿವೆ ಮೂಲಗಳು.

ಈ ನಡುವೆ ನಟ ಚೇತನ್​ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಸೆಂಟ್ರಲ್​ ವಿಭಾಗದ ಡಿಸಿಪಿ ಮಾಹಿತಿ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಚೇತನ್​​ ಟ್ವೀಟ್​​ವೊಂದು ಮಾಡಿದ್ದರು. ಅಂದು ಗುರಿಯಾಗಿಸಿ ಟ್ವೀಟ್​​ ಮಾಡಿದ್ದ ನ್ಯಾಯಾಧೀಶರೇ 16ನೇ ತಾರೀಖು ಹಿಜಾಬ್ ವಿಚಾರಣೆ ಪೀಠದಲ್ಲಿ ಇದ್ರು. ಇದನ್ನು ರೀ ಟ್ವೀಟ್​ ಮಾಡಿ ನ್ಯಾಯಾಧೀಶರು ಸ್ತ್ರೀ ವಿರೋಧಿ ಎಂದು ಬರೆದುಕೊಂಡಿದ್ದರು.

ಈ ಹಿಂದೆಯೂ ಚೇತನ್​ ಅವರಿಗೆ ಹಿಜಾಬ್​​ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂದು ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಸೂಚಿಸಿದ್ದರು.

ಫೆ12 ರಂದು ಮೌಖಿಕ ಸೂಚನೆ ನೀಡಿದ್ರೂ ಫೆ 16 ರಂದು ಹೀಗೆ ಟ್ವೀಟ್​ ಮಾಡಿ ನ್ಯಾಯಾಧೀಶರನ್ನು ಚೇತನ್​​ ನಿಂದಿಸಿದ್ದಾರೆ. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ನನ್ನ ಗಂಡನನ್ನು ಬಂಧಿಸಿದ್ದಾರೆ – ಪತ್ನಿ ಮೇಘನಾ :

ನಟ ಚೇತನ್​​ ಅಹಿಂಸಾ ಕಾಣೆಯಾಗಿದ್ದಾರೆ ಎನ್ನಲಾಗಿದೆ. ನಟ ಚೇತನ್​​​​ ಹೆಂಡತಿ ಮೇಘನಾ ಖುದ್ದು ಫೇಸ್​ಬುಕ್​​ ಲೈವ್​​ ಬಂದು ಶೇಷಾದ್ರಿಪುರಂ ಪೊಲೀಸರು ನನ್ನ ಗಂಡನನ್ನು ಬಂಧಿಸಿದ್ದಾರೆ ಎಂದು  ಆರೋಪಿಸುತ್ತಿದ್ದಾರೆ.

ನನ್ನ ಗಂಡ ಕಾಣಿಸುತ್ತಿಲ್ಲ. ಪೊಲೀಸ್​ ಅವರನ್ನು ಕೇಳಿದ್ರೆ ನಮ್ಮ ಕಸ್ಟಡಿಯಲ್ಲಿ ಇಲ್ಲ ಎನ್ನುತ್ತಿದ್ದಾರೆ.

ನನ್ನ ಗಂಡ ಮತ್ತು ಗನ್​​ ಮ್ಯಾನ್​​ ಫೋನ್ ಸ್ವಿಚ್​ ಆಫ್​​ ಬರುತ್ತಿದೆ. ಎಸಿಪಿ ಅವರನ್ನು ಕೇಳಿದೂ ಏನು ಹೇಳುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!