ಎರಡು ಖಾಸಗಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದಾರೆ. ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶಿವಮೊಗ್ಗ ಬಳಿಯ ಚೋರಡಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಶಿವಮೊಗ್ಗ-ಸಾಗರ ರಸ್ತೆಯ ಚೋರಡಿ ಬಳಿ ಜರುಗಿದ ಈ ಭೀಕರ ಅಪಘಾತದಲ್ಲಿ ಎರಡು ಬಸ್ ಗಳ ಮುಂಭಾಗವು ನಜ್ಜುಗುಜ್ಜಾಗಿದೆ.
ಖಾಸಗಿ ಬಸ್ ಗಳ ಢಿಕ್ಕಿಯಿಂದಾಗಿ ಬಸ್ ನಲ್ಲಿದ್ದ 4 ಪ್ರಯಾಣಿಕರು ಸಾವನ್ನಪ್ಪಿದ್ದಾರೆ . ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಬಸ್ ಅಪಘಾತದಲ್ಲಿ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.