ಕೊಳ್ಳೇಗಾಲ : ಸಕ್ರಾಂತಿ ಹಬ್ಬದ ನಿಮಿತ್ಯ ದೇವಸ್ಥಾನಕ್ಕೆಂದು ಹೋಗುತ್ತಿದ್ದಾಗ ತಾಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ಬಳಿ ಭತ್ತ ಕುಯ್ಯುವ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರು ಸಾವನಪ್ಪಿರುವ ಘಟನೆ ನಡೆದಿದೆ.
ಪಾಳ್ಯ ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾದ ಸಂತೋಷ್ (28) ಸೌಮ್ಯ (26) 1 ಮತ್ತು 3 ನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳು ಮೃತ ದುರ್ದೈವಿಗಳಾಗಿದ್ದಾರೆ.
ಭತ್ತ ಕುಯ್ಯುವ ಟ್ರ್ಯಾಕ್ಟರ್ ನಲ್ಲಿ ಇರುವ ಕಬ್ಬಿಣದ ರಾಡುಗಳಿಗೆ ಬಲವಾಗಿ ಗುದ್ದಿದ್ದು ಬುರುಡೆ ಮತ್ತು ದೇಹದ ಭಾಗಗಳು ಛಿದ್ರವಾಗಿದೆ.
ದಂಪತಿ ಮತ್ತು ಮಕ್ಕಳ ದುರ್ಮರಣದಿಂದ ಸಂಬಧಿಕರು ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ ಇನ್ನು ಈ ಘಟನೆ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಿಯ ಉಪ ನೀರಿಕ್ಷಕ ಗಣೇಶ್ ಮತ್ತು ಸಿಬ್ಬಂದಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು. ಮೃತ ದೇಹಗಳನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಅಂತ್ಯ ಕ್ರಿಯೆ ನೆರೆವೇರಿಸಲಾಗಿದೆ.ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ : ಯಾವ ಜಿಲ್ಲೆಗೆ ಯಾರು ?
ಶಾಸಕರು ಎಮ್ ಆರ್ ಮಂಜುನಾಥ್ ಸಂತಾಪ ಸೂಚಿಸಿದ್ದಾರೆ .
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ