ಸಾಹಸ ಸಿಂಹ ವಿಷ್ಣುವರ್ಧನ್ ವಿರುದ್ಧ ಇಲ್ಲ ಸಲ್ಲದ ಮಾತುಗಳನ್ನು ಹೇಳಿರುವ
ತೆಲುಗು ಚಿತ್ರರಂಗದ ವಿಲನ್ ವಿಜಯ್ ರಂಗರಾಜು ವಿರುದ್ಧ ವಿಷ್ಣು ಸೇನಾ ಸಮಿತಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.
ಸಂದರ್ಶನದ ವೇಳೆ ವಿಲನ್ ವಿಜಯ ರಂಗರಾಜು ಬೇರೆ ಬೇರೆ ಕಲಾವಿದರ ಜೊತೆ ನಟಿಸಿದ್ದಾಗ ಆದ ಅನುಭವದ ಬಗ್ಗೆ ಮಾತನಾಡಿದ್ದಾರೆ. ವಿಷ್ಣು ಅವರ ಬಗ್ಗೆ ಇಲ್ಲಸಲ್ಲದ್ದು ಹೇಳಿದ್ದಾರೆ ಎನ್ನಲಾಗಿದೆ.
ಸಮಿತಿ ಆ ನಟನ ಹೆಸರನ್ನು ರಿವೀಲ್ ಮಾಡಿಲ್ಲ. ಆದರೆ ಅವರು ವಿಜಯ್ ರಂಗರಾಜು ಎನ್ನಲಾಗಿದೆ. ಕರ್ನಾಟಕ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಾಗಿದೆ. ನಟರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಈ ಸಮಿತಿ ಸದಸ್ಯರು ಕೆಎಫ್‌ಸಿಸಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ವಿಜಯ್ ರಂಗರಾಜು ಹಿರಿಯ ತೆಲುಗು ನಟರು. 35 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಅವರು ವಿಷ್ಣುವರ್ಧನ್ ಬಗ್ಗೆ ಅಶ್ಲೀಲವಾಗಿ, ನಕಾರಾತ್ಮಕವಾಗಿ ಮಾತನಾಡಿದ್ದಾರೆ ದೂರಿನಲ್ಲಿ ಹೇಳಲಾಗಿದೆ.
ವಾಣಿಜ್ಯ ಮಂಡಳಿಗೆ ದೂರು:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಅವರೊಡನೆ ಡಾ.ವಿಷ್ಣು ಸೇನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಯದುನಂದನ್ ಗೌಡ, ಮಹಿಳಾ ಘಟಕದ ಅಧ್ಯಕ್ಷರಾದ ರಾಧಾ ಗಂಗಾಧರ್, ಉಪಾಧ್ಯಕ್ಷರಾದ ಭಾಗ್ಯರಾಮು, ಹಿರಿಯ ಸೇನಾನಿಗಳಾದ ತುಳಸೀಕೃಷ್ಣ, ಚೆನ್ನಪ್ಪ, ರಾಜೇಂದ್ರ, ವಿಎಸ್ಎಸ್ ನಂದಿನಿ ಬಡಾವಣೆ ಅಧ್ಯಕ್ಷರಾದ ಭಗವಂತ ಮತ್ತು ಇತರೆ ಸೇನಾನಿಗಳಾದ ಸುಕನ್ಯ, ಗಂಗಾಧರ್ ಮುಂತಾದವರು ಸಭೆ ನಡೆಸಿದರು.
ಯಜಮಾನ್ರ ಬಗ್ಗೆ ಅವಹೇಳನಕಾರಿ
ಯಾಗಿ ಮಾತನಾಡಿದ ನಟನೊಬ್ಬನ ಮೇಲೆ ಕ್ರಮ ಜರುಗಿಸುವಂತೆ ಕೋರಲಾಯಿತು.
ಕೈ ಕಟ್ಟಿ ಕೂರುವುದಿಲ್ಲ- ವಿಷ್ಣು ಸೇನೆ:
ಆ ವ್ಯಕ್ತಿ ಯಾರು? ಘಟನೆ ಏನು? ಎಂಬಿತ್ಯಾದಿ ವಿವರಗಳು ಕಾರಣಾಂತರಗಳಿಂದ ಈಗ ಸದ್ಯಕ್ಕೆ ನಿಮ್ಮೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಆದ್ರೆ ಯಜಮಾನ್ರ ಹಿತಾಸಕ್ತಿಗೆ ದಕ್ಕೆ ಬಂದಾಗ ಕೈಕಟ್ಟಿ ಕೂರುವುದಿಲ್ಲ ಎಂಬುದನ್ನು ಮಾತ್ರ ತಿಳಿಸಲು ಇಚ್ಚಿಸುತ್ತೇವೆ. ಡಾ.ವಿಷ್ಣು ಸೇನಾ ಸಮಿತಿ. ಹೇಳಿದೆ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ