ಗ್ರಾ ಪಂ ಸದಸ್ಯರನ್ನು ಹರಾಜು ಹಾಕಿದರೆ ಸದಸ್ಯತ್ವವೇ ಅನರ್ಹ – ಹೊಸ ಕಾನೂನು ?

Team Newsnap
2 Min Read
  • ಸದಸ್ಯರ ಸಂತೆ ಹರಾಜಿಗೆ ಬ್ರೇಕ್ ಹಾಕಲು ಕಾನೂನು ಅನಿವಾರ್ಯ
  • ರಾಜ್ಯದ ಬೀದರ್, ಮಂಡ್ಯ ಸೇರಿದಂತೆ ವಿವಿಧ ಕಡೆ ಸಾಕಷ್ಟು ಪ್ರಕರಣ ಬೆಳಕಿಗೆ
  • ಅಭಿವೃದ್ಧಿಗಾಗಿ ಸದಸ್ಯರನ್ನು ಹರಾಜು ಹಾಕಬೇಕೆ?
  • ಹರಾಜು ಹಾಕುವ ಪಂಚಾಯತಿಗಳ ಅಧಿಕಾರ ರದ್ದು ಮಾಡಿ ಪಿಡಿಓಗಳನ್ನೇ ಆಡಳಿತಾಧಿಕಾರಿಯಾಗಿ ಮಾಡುವುದು

ಗ್ರಾಮ‌ ಪಂಚಾಯತಿ ಸದಸ್ಯರನ್ನು
ಹರಾಜಿನ ಮೂಲಕ ಆಯ್ಕೆ ಮಾಡುವ ಪ್ರಜಾಪ್ರಭುತ್ವದ ವಿರೋಧಿ ವ್ಯವಸ್ಥೆ ಯನ್ನು ಬುಡಮೇಲು ಮಾಡುವ ಅನಿಷ್ಟ ಪದ್ದತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

ಇನ್ನು ಮುಂದೆ ಗ್ರಾಮ ಪಂಚಾಯತ್ ಸದಸ್ಯರನ್ನು ಚುನಾವಣೆ ನಡೆಸದೆ, ಕಾರಣಕ್ಕಾಗಿ ಹಾಕಿ ಅವಿರೋಧವಾಗಿ ಆಯ್ಕೆ ಮಾಡಿದರೆ ಅಂತಹವರ ಸದಸ್ಯತ್ವವನ್ನೇ ಅನರ್ಹಗೊಳಿಸಲು ರೂಪರೇಷೆ ಸಿದ್ದತೆ ಮಾಡಲಾಗುತ್ತದೆ.

ಸದಸ್ಯರ ಸಂತೆ ಹರಾಜಿಗೆ ಬ್ರೇಕ್?

ರಾಜ್ಯದ ನಾನಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮುಖಂಡರು ಕುರಿ, ಕೋಳಿಗಳನ್ನು ಸಂತೆಯಲ್ಲಿ ಹಾರಾಜು ಹಾಕಿದಂತೆ ಗ್ರಾಮ ಪಂಚಾಯತ್ ಸದಸ್ಯರನ್ನೂ ಲಕ್ಷ ಲಕ್ಷ ರುಗಳಿಗೆ ಬಹಿರಂಗವಾಗಿಯೇ ಹರಾಜು ಹಾಕುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಸದಸ್ಯರನ್ನೇ ಹರಾಜು ಹಾಕುವ ಪ್ರವೃತ್ತಿಗೆ ಕಡಿವಾಣ ಹಾಕಲು ಈಗಿರುವ ಕಾನೂನಿಗೆ ತಿದ್ದುಪಡಿ ಮಾಡಿ, ಹಣ ಕೊಟ್ಟು ಹರಾಜಿನಲ್ಲಿ ಆಯ್ಕೆಯಾಗಿ ರುವುದು ಸಾಬೀತಾದರೆ, ಅಂತಹ ಸದಸ್ಯರ ಸದಸ್ಯತ್ವವನ್ನೇ ಅನರ್ಹಗೊಳಿ ಸುವ, ಹಾಗೂ ದಂಡ ಮತ್ತು ಶಿಕ್ಷೆ ವಿಸುವ ನಿಯಮವನ್ನು ಜಾರಿಗೊಳಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸಾಕಷ್ಟು ಪ್ರಕರಣ ಬೆಳಕಿಗೆ:

ರಾಜ್ಯದಲ್ಲಿ ಗ್ರಾಮಪಂಚಾಯ್ತಿ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಕಲಬುರಗಿ, ಬೀದರ್, ಮಂಡ್ಯ, ಯಾದಗಿರಿ, ಬೆಳಗಾವಿ ಸೇರಿದಂತೆ ಅನೇಕ ಕಡೆ ಗ್ರಾಮಪಂಚಾಯತಿ ಚುನಾವಣೆ ನಡೆಸದೆ ಬಹಿರಂಗವಾಗಿ ಸದಸ್ಯರನ್ನೇ ಹರಾಜು ಹಾಕಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಅಭಿವೃದ್ಧಿ ನೆಪದಲ್ಲಿ ಸದಸ್ಯರ ಹರಾಜು:

ಗ್ರಾಮಗಳ ಅಭಿವೃದ್ದಿ, ದೇವಸ್ಥಾನ ಅಭಿವೃದ್ಧಿ ಹೆಸರಿನಲ್ಲಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಒಬ್ಬೊಬ್ಬ ಸದಸ್ಯರಿಗೆ 8ರಿಂದ 10 ಲಕ್ಷದವರೆಗೂ ಹರಾಜು ಹಾಕಲಾಗುತ್ತಿತ್ತು. ಬಹುತೇಕ ಕಡೆ ಇದು ಮತ್ತೆ ಮರುಕಳುಹಿಸ ಬಹುದೆಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನು ಕೊನೆಗಾಣಿಸಲು ಮುಂದಾಗಿದೆ.

ಪಿಡಿಓ ಗಳೇ ಆಡಳಿತಾಧಿಕಾರಿಗಳು !

ಯಾವ ಪಂಚಾಯ್ತಿಗಳಲ್ಲಿ ಸದಸ್ಯರನ್ನು ಹರಾಜು ಹಾಕುತ್ತಾರೋ ಅಂತಹ ಕಡೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಗ್ರಾಮಪಂಚಾಯ್ತಿಗೆ ಆಡಳಿತಾಕಾರಿ ನೇಮಕ ಮಾಡಲು ಚಿಂತಿಸಿದೆ. ಪಿಡಿಒಗಳೇ ಆಡಳಿತಾಕಾರಿಗಳಾಗಿ ನೇಮಕ ಮಾಡಿ ಇಡೀ ಆಡಳಿತ ವ್ಯವಸ್ಥೆ ಅವರ ಕೈಯಲ್ಲಿರುತ್ತದೆ.

Share This Article
Leave a comment