ಪರ ಭಾಷ ಕಿರುತೆರೆ ಕಲಾವಿದ ಪವನ್ ಹೃದಯಾಘಾತದಿಂದ ನಿಧನ

Team Newsnap
1 Min Read

ಕೆ ಆರ್ ಪೇಟೆ : ಕೆ.ಆರ್.ಪೇಟೆ ತಾಲೂಕಿನ ಪರ ಭಾಷೆಯ ಕಿರುತೆರೆ ಕಲಾವಿದ ಪವನ್ (25) ಹೃದಯಘಾತದಿಂದ ಇಂದು ಮುಂಬೈನಲ್ಲಿ ನಿಧನರಾದರು.

ಹಿಂದಿ ಹಾಗೂ ತಮಿಳು ಕಿರುತೆರೆಯಲ್ಲಿ ನಟಿಸುತ್ತಿದ್ದ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದ ನಾಗರಾಜು ಮತ್ತು ಸರಸ್ವತಿಯ ಪುತ್ರ ಪವನ್ ಮುಂಬೈ ನಗರದ ತಮ್ಮ ನಿವಾಸದಲ್ಲಿ ಗುರುವಾರ ಮುಂಜಾನೆ ತೀವ್ರ ಹೃದಯಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟ ʻವಿಕ್ರಮ್ ಲ್ಯಾಂಡರ್ʼ: ಆ 23 ರಂದು ಚಂದ್ರನಲ್ಲಿ ಹೆಜ್ಜೆ

ಅತಿಯಾದ ಜಿಮ್ ಗೆ ಮಾರು ಹೋಗಿದ್ದೇ ಈ ದುರಂತ ಘಟನೆಗೆ ಕಾರಣವಾಗಿದೆ ಎಂದು ಗೊತ್ತಾಗಿದೆ ಮುಂಬೈನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶುಕ್ರವಾರ (ಆ.18) ಬೆಳಿಗ್ಗೆ 10 ಗಂಟೆಗೆ ಹರಿಹರಪುರದಲ್ಲಿರುವ ಮೃತರ ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ

ಪರ ಭಾಷ ಕಿರುತೆರೆ ಕಲಾವಿದ ಪವನ್ ಹೃದಯಾಘಾತದಿಂದ ನಿಧನ- Para Bhasha television artist Pawan dies of heart attack #mandya #mysore

Share This Article
Leave a comment