ತೆಲಂಗಾಣದಲ್ಲಿ ಮಂಡ್ಯದ ಕುಟುಂಬ ಸಂಕಷ್ಟದಲ್ಲಿ ಇರುವುದನ್ನು ಅರಿತ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವಿಟರ್ ಮೂಲಕ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಂತೆ ಕೆಸಿಆರ್ ಸರ್ಕಾರ ತ್ವರಿತವಾಗಿ ಸ್ಪಂದಿಸಿದೆ.
ಮಂಡ್ಯ ಮೂಲದ ಶಶಿಕಲಾ ಮಂಜುನಾಥ್ ಕುಟುಂಬ ಸಂಕಷ್ಟದಲ್ಲಿತ್ತು. ಅವರ ಪತಿ ಮೆಡಿಕೋವರ್ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾಗಿದ್ದಾರೆ. ಪತಿಯ ಚಿಕಿತ್ಸೆಗಾಗಿ ಶಶಿಕಲಾ ಸಾಕಷ್ಟು ಹಣ ಖರ್ಚು ಮಾಡಿದ್ದರು.
ಅಂತಿಮವಾಗಿ ಆಸ್ಪತ್ರೆಯ 7.5 ಲಕ್ಷ ರೂ. ಬಿಲ್ ಆಗಿತ್ತು. , ಇನ್ನು 2 ಲಕ್ಷ ರು ಮೊತ್ತವನ್ನು ಅವರು ಇನ್ನೂ ಪಾವತಿಸಬೇಕಿತ್ತು. ಆದರೆ ಹಣ ಪಾವತಿಸುವವರೆಗೂ ಮೃತದೇಹ ಬಿಟ್ಟುಕೊಡುವುದಿಲ್ಲ ಎಂದು ಆಸ್ಪತ್ರೆ ಹಠ ಹಿಡಿದಿತ್ತು. ಆಗ ಡಿಕೆಶಿ ಶಶಿಕಲಾ ಅವರ ಕುಟುಂಬದ ಸಹಾಯಕ್ಕೆ ಧಾವಿಸುವಂತೆ ಮುಖ್ಯ ಮಂತ್ರಿ ಕೆಸಿ ಆರ್ ಅವರಿಗೆ ಮನವಿ ಮಾಡಿದ್ದರು.
ಪ್ರತಿಕ್ರಿಯೆ ನೀಡಿದ ಟಿಆರ್ಎಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), ಶಿವಕುಮಾರ್ ಅವರೇ, ನಾವು ಆ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತೇವೆ. ದಯವಿಟ್ಟು ಅವರ ಸಂಪರ್ಕದ ವಿವರ ನೀಡಿ. ನಮ್ಮ ಕಚೇರಿ ಅಧಿಕಾರಿಗಳು ಕೂಡಲೇ ಆಸ್ಪತ್ರೆ ಮೂಲವನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದಾರೆ ಎಂದು ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ಮೃತದೇಹವನ್ನು ಬಿಡುಗಡೆ ಮಾಡಿಸಿದ್ದಾರೆ.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ