ಪ್ರತಾಪ್ ಸಿಂಹ ಪ್ರಶ್ನೆಗೆ ಲೆಕ್ಕ ನೀಡಿ ಉತ್ತರ ಕೊಟ್ಟ ಡಿ ಸಿ ರೋಹಿಣಿ ಸಿಂಧೂರಿ

Team Newsnap
1 Min Read
Rohini Sindhuri's husband Sudhir grab land in Yalahanka? Complaint via tweet to DGP ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ಕೋವಿಡ್ ನಿರ್ವಹಣೆಗೆ ಬಿಡುಗಡೆಯಾದ 41 ಕೋಟಿಯಲ್ಲಿ ವೆಚ್ಚ ಮಾಡಿರುವ 38 ಕೋಟಿ ರೂಪಾಯಿಯ ಲೆಕ್ಕ ಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮಾಧ್ಯಮಗಳಲ್ಲೇ ಪ್ರಶ್ನೆ ಮಾಡಿದ್ದರು.

ಸಂಸದರ ಪ್ರಶ್ನೆಗೆ ಉತ್ತರಿಸಿ‌ರುವ ಡಿಸಿ ರೋಹಿಣಿ ವೈಯಕ್ತಿಕ ದಾಳಿಗಳು ಜಿಲ್ಲಾಡಳಿತವನ್ನು ತನ್ನ ಕೆಲಸದಿಂದ ದೂರವಿರಿಸಲು ಸಾಧ್ಯವಾಗದಿದ್ದಾಗ, ಈಗ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸುಳ್ಳು ಮತ್ತು ಬೇಜವಾಬ್ದಾರಿ ಹೇಳಿಕೆಗಳು ಪ್ರಾರಂಭವಾಗಿವೆ. ಹೀಗಾಗಿ ಈ ಅಂಕಿ ಅಂಶ ನೀಡುತ್ತಿದ್ದೇನೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ದುಡ್ಡು ಯಾವುದಕ್ಕೆ ವ್ಯಯ ಮಾಡಲಾಗಿದೆ ? ವಿವರ ನೋಡಿ‌:

  • ಜಿಲ್ಲಾಸ್ಪತ್ರೆ ವೈದ್ಯಕೀಯ ಉಪಕರಣಗಳು, ಔಷಧ, ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಟೇಷನರಿ ಇತ್ಯಾದಿ: 13 ಕೋಟಿ ರು.
  • ಐಸೋಲೇಷನ್ ವ್ಯವಸ್ಥೆ ಮತ್ತು ಕೋವಿಡ್ ಕೇರ್ ಸ್ಥಾಪನೆ ಮತ್ತು ನಿರ್ವಹಣೆ ಇತ್ಯಾದಿ: 5 ಕೋಟಿ ರು.
  • ಕ್ವಾರಂಟೈನ್ ಒಳಪಟ್ಟವರಿಗೆ ಹೋಟೆಲ್ ವಾಸ್ತವ್ಯ, ಅಂದಿನಿಂದ ಇಂದಿನವರೆಗೆ ರೋಗಿಗಳಿಗೆ ಊಟದ ವ್ಯವಸ್ಥೆ: 4 ಕೋಟಿ ರು
  • ಮೈಸೂರು ಮೆಡಿಕಲ್ ಕಾಲೇಜಿಗೆ ಟೆಸ್ಟಿಂಗ್ ಮೆಟಿರಿಯಲ್ಸ್: 7 ಕೋಟಿ ರು
  • ಸ್ವಾಬ್ ಕಲೆಕ್ಷನ್ ಮತ್ತು ಹೊರಗುತ್ತಿಗೆ ಸಿಬ್ಬಂದಿ: 1 ಕೋಟಿ ರು.
  • ವ್ಯಾಕ್ಸಿನೇಷನ್ ಮತ್ತು ಟೆಸ್ಟಿಂಗ್ ವಾಹನ ವ್ಯವಸ್ಥೆ: 4 ಕೋಟಿ ರು.
  • ಆಮ್ಲಜನಕ ಪೂರೈಕೆ: 1 ಕೋಟಿ ರು
  • ಇತರೆ ವೆಚ್ಚಗಳು(ದೂರವಾಣಿ, ಇಂಟರ್ನೆಟ್, ಕಂಪ್ಯೂಟರ್, ಶಾಮಿಯಾನ ಇತ್ಯಾದಿ) 1 ಕೋಟಿ ರು
Share This Article
Leave a comment