ತೆಲಂಗಾಣ ಸರ್ಕಾರದಿಂದ ಮಹತ್ವದ ನಿರ್ಧಾರ : ರಾಜ್ಯಾದ್ಯಂತ ಗುಟ್ಕಾ, ತಂಬಾಕು, ಪಾನ್ ಮಸಾಲಾ ನಿಷೇಧ

Team Newsnap
1 Min Read

ಹೈದರಾಬಾದ್ : ತೆಲಂಗಾಣ ಸರ್ಕಾರ ರಾಜ್ಯಾದ್ಯಂತ ಗುಟ್ಕಾ, ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ರಾಜ್ಯದಾದ್ಯಂತ ಒಂದು ವರ್ಷದ ಅವಧಿಗೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಮೇ 24 ರಂದು ಸಾರ್ವಜನಿಕ ಆರೋಗ್ಯದ ಕಾಳಜಿಯನ್ನು ಉಲ್ಲೇಖಿಸಿ ತೆಲಂಗಾಣ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ನಿಷೇಧ ಮತ್ತು ಮಾರಾಟದ ನಿರ್ಬಂಧ) ನಿಯಮಾವಳಿ 2011ರ ನಿಯಮಾವಳಿ 2.3.4ರ ಜೊತೆಗೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಸೆಕ್ಷನ್ 30ರ ಉಪ-ವಿಭಾಗ (2) ರ ಷರತ್ತು (ಎ) ಅಡಿಯಲ್ಲಿ ನಿಷೇಧವನ್ನು ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರದ ಈ ಆದೇಶಕ್ಕೆ ಪಾನ್ ಶಾಪ್ ಮಾಲೀಕರಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಒಪ್ಪಿಗೆ ಸೂಚಿಸಿದ್ದರೆ ಮತ್ತೆ ಕೆಲ ಮಾಲೀಕರು ಆದೇಶ ಪಾಲನೆಗೆ ಸಹಕಾರ ನೀಡುತ್ತಿಲ್ಲ .

ತೆಲಂಗಾಣ ಪಾನ್ ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಮೊಹಮ್ಮದ್ ಸಲಾವುದ್ದೀನ್ ದಖ್ನಿ, ”ತೆಲಂಗಾಣದಲ್ಲಿ ಸುಮಾರು 1.5 ಲಕ್ಷ ಪಾನ್ ಶಾಪ್‌ಗಳಿವೆ. ನಾವು ಗುಟ್ಕಾ ನಿಷೇಧವನ್ನು ಬೆಂಬಲಿಸುತ್ತೇವೆ ಮತ್ತು ಅನೇಕ ಅಂಗಡಿಗಳು ಈಗಾಗಲೇ ಅದರ ಮಾರಾಟವನ್ನು ನಿಲ್ಲಿಸಿವೆ.

ಲಕ್ಷಾಂತರ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಗುಟ್ಕಾ ಮಾರಾಟ ಅವಲಂಬಿಸಿರುವುದರಿಂದ ಜಗಿಯುವ ತಂಬಾಕು ಮತ್ತು ಜರ್ದಾಕ್ಕೆ ನಿಷೇಧದಿಂದ ವಿನಾಯಿತಿ ನೀಡುವಂತೆ ನಾವು ಅಧಿಕಾರಿಗಳನ್ನು ವಿನಂತಿಸುತ್ತೇವೆ. ನಮ್ಮ ಸಂಘ ಗುಟ್ಕಾ ನಿಷೇಧ ಸಂಬಂಧ ಈ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಮನವಿ ಸಲ್ಲಿಸಿತ್ತು.ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ : ಎಫ್‌ಐಆರ್‌ ದಾಖಲು

ಸಲಾವುದ್ದೀನ್ , ರಾಜ್ಯಾದ್ಯಂತ ಅನೇಕ ಪಾನ್ ಶಾಪ್‌ಗಳಲ್ಲಿ ಗುಟ್ಕಾ ಮಾರಾಟ ಮಾಡುವುದಿಲ್ಲ ಎಂಬ ಪೋಸ್ಟರ್‌ಗಳನ್ನು ಸಹ ಪ್ರದರ್ಶಿಸಲಾಗಿದೆ ಎಂದು ಹೇಳಿದ್ದಾರೆ.

Share This Article
Leave a comment