ಬೆಂಗಳೂರು :
ಆದಾಯಕ್ಕಿಂತ ಶೇ 62 ರಷ್ಟು ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿ ಅಮಾನತ್ತುಗೊಂಡಿರುವ ತಹಶೀಲ್ದಾರ್ ಅಜಿತ್ ರೈಗೆ ಹಿಂಬಡ್ತಿ(ಗ್ರೇಡ್ -೨)ನೀಡಿ
ಬೆಂಗಳೂರು ಕೆ.ಆರ್ ಪುರಂನಿಂದ ರಾಯಚೂರು ಸಿರಿವಾರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಗ್ರೇಡ್-1 ತಹಶೀಲ್ದಾರ್ ಆಗಿದ್ದ ಅಜಿತ್ ರೈ ಅವರಿಗೆ ಗ್ರೇಡ್-2 ಹಿಂಬಡ್ತಿ ನೀಡಿ ಸಿರಿವಾರಕ್ಕೆ ವರ್ಗಾವಣೆ ಮಾಡಿ ರಾಜ್ಯಪಾಲರ ಸೂಚನೆ ಮೇರೆಗೆ ಕಂದಾಯ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಆದೇಶಿಸಿದ್ದಾರೆ
ಜೂನ್ 28ರಿಂದಲೂ ಅಮಾನತ್ತಿನಲ್ಲಿರುವ ಅಜಿತ್ ರೈ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಅಡಿ ಲೋಕಾಯುಕ್ತ ಪೊಲೀಸರ ದಾಳಿಗೆ ಒಳಗಾಗಿದ್ದಾರೆ.
ವಿಚಾರಣೆಯಲ್ಲಿರುವ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ. ಹಿಂದುಳಿದ ನೂತನ ತಾಲೂಕು ಸಿರವಾರ ಅಭಿವೃದ್ಧಿಗೆ ದಕ್ಷ ಅಧಿಕಾರಿಯನ್ನು ನೇಮಿಸುವಂತೆ ಅಲ್ಲಿನ ಜನ ಆಗ್ರಹಿಸಿದ್ದಾರೆ.