ವಿಶ್ವನಾಥ್ ರ ಈಗಿನ ಗತಿಗೆ ಟೀಂ ಆಫ್ ಬಾಂಬೆ ಹೊಣೆ – ಸಾ.ರಾ.ಮಹೇಶ್

Team Newsnap
2 Min Read

ರಾಜ್ಯ ಹೈಕೋರ್ಟ್ ಎಚ್ ವಿಶ್ವನಾಥ್ ಮಂತ್ರಿಯಾಗುವ ಅರ್ಹತೆ ಪಡೆದಿಲ್ಲಾ ಎಂದು ಮಧ್ಯಂತರ ತೀರ್ಪು ನೀಡಿದರೂ ಅದರ ಹಿಂದೆ ಬಾಂಬೆ ಟೀಂ ಮಸಲತ್ತು ಇದೆ ಎಂದು ಶಾಸಕ ಸಾರಾ ಮಹೇಶ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ ರಾ ಮಹೇಶ್,
ಹೈಕೋರ್ಟ್ ತೀರ್ಪು ನೀಡಿರುವುದು ಕಾನೂನಿ ವ್ಯಾಪ್ತಿಯಲ್ಲಿ ಇರಬಹುದು. ಆದರೆ ಇದರ ಹಿಂದೆ ಬಾಂಬೆ ಟೀಂ ಮಸಲತ್ತು ಇದ್ದೇ ಇದೆ. ಬಾಂಬೆ ಟೀಂನಲ್ಲಿರುವ ಸಚಿವಾಕಾಂಕ್ಷಿಗಳು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿಸಿ ವಿಶ್ವನಾಥ್ ಗೆ ಅತಂತ್ರ ಪರಿಸ್ಥಿತಿಯನ್ನು ತಂದೊಡ್ಡಿದ್ದಾರೆಂದು ಮಹೇಶ್ ಬಾಂಬ್ ಸಿಡಿಸಿದರು.

ಹಳೇ ಇಂಜಿನ್ ಗೆ ಬಣ್ಣ ಹೊಡೆದಿದ್ದೆವು:

7d77ab95 7948 4650 988a 7b0ec8d0dde3

ವಾಹನದ ಹಳೇ ಇಂಜಿನ್ ಸೀಜ್ ( ವಿಶ್ವನಾಥ್) ಆಗಿ ಕಾಂಗ್ರೆಸ್ ಪಕ್ಷದಲ್ಲಿ ಓಡದೆ ನಿಂತಿದ್ದ ಗಾಡಿಯನ್ನು ನಾವು ಜೆಡಿಎಸ್ ಗೆ ತಂದು ರಿಪೇರಿ ಮಾಡಿಸಿ ಬಣ್ಣ ಹೊಡೆಸಿ ಹೊಸದಾಗಿ ರೂಪಿಸಿದ್ದೇವು. ವಿಶ್ವನಾಥ್ ಕಾಗೆ ಅಲ್ಲ ಕೋಗಿಲೆ ಎಂದು ನಂಬಿಸಿದ್ದೇವು. ಅಧಿಕಾರದ ಆಸೆಗೆ ಬಿಜೆಪಿ ಗೆ ಹೋದರು. ಹೀಗಾಗಿ ಈ ಬೆಳವಣಿಗೆಗಳು ವಿಶ್ವನಾಥ್ ರ ರಾಜಕೀಯ ಭವಿಷ್ಯ ಮಂಕಾಗುವಂತೆ ಮಾಡಿವೆ ಎಂದರು.

ಅಂದು ನಾನು ಕಣ್ಣೀರು ಹಾಕಿದ್ದೆ:

ಕಳೆದ ವರ್ಷ ಇದೇ ಸಮಯದಲ್ಲಿ ನಾನು ಚಾಮುಂಡಿಬೆಟ್ಟದಲ್ಲಿ ಆಣೆ ಪ್ರಮಾಣ ಮಾಡುವ ವಿಚಾರದಲ್ಲಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕುಳಿತು ಕಣ್ಣೀರು ಹಾಕಿದ್ದೆ. ಗ್ರಾಮ ದೇವತೆ ತಾಯಿ ಚಾಮುಂಡೇಶ್ವರಿ ದೇವಿ ನ್ಯಾಯ ದೇವತೆಯಾಗಿ ಈಗ ವಿಶ್ವನಾಥ್ ಗೆ ಈ ರೀತಿಯ ಶಿಕ್ಷೆ ಕೊಡಿಸಿದ್ದಾಳೆ ಎಂಬುದನ್ನು ಮರೆಯಬಾರದು ಎಂದರು.

ತಾಯಿ ತಪ್ಪಾಗಿದೆ ಕ್ಷಮಿಸು:

ಇಂದು ಮತ್ತೆ ಚಾಮುಂಡೇಶ್ವರಿ ಸನ್ನಿಧಿಗೆ ಹೋಗಿ 1001 ರೂಪಾಯಿ ತಪ್ಪು ಕಾಣಿಕೆಯನ್ನು ಹುಂಡಿಯಲ್ಲಿ ಹಾಕಿ ನನ್ನಿಂದ ಏನಾದರೂ ತಪ್ಪಾಗಿದ್ರೆ ಕ್ಷಮಿಸು ಎಂದು ದೇವರನ್ನು ಕೇಳಿಕೊಂಡಿದ್ದೇನೆ. ನಿನ್ನ ಕ್ಷೇತ್ರವನ್ನು ಸಾಕ್ಷಿಯಾಗಿ ಇಟ್ಟುಕೊಂಡಿದ್ದಕ್ಕೆ ಕ್ಷಮಿಸು ತಾಯಿ ಎಂದು ಕೇಳಿಕೊಂಡು ಬಂದೆ ಎಂದು ತಿಳಿಸಿದರು.

ವಿಶ್ವನಾಥ್ ಅವರನ್ನು ಮಂತ್ರಿ ಮಾಡುವ ಅವಶ್ಯಕತೆ ಬಿಜೆಪಿಯವರಿಗೆ ಇರಲಿಲ್ಲ. ಈ ಕಾರಣದಿಂದಲೇ ನಾಮ ನಿರ್ದೇಶನ ಮಾಡಿದ್ದಾರೆ. ಈಗ ಈ ಇಳಿವಯಸ್ಸಿನಲ್ಲಿ ವಿಶ್ವನಾಥ್ ಗೆ ಈ ಗತಿ ಬಂತಲ್ಲ ಎಂದು ಮಹೇಶ್ ವ್ಯಂಗ್ಯ ವಾಡಿದರು.

Share This Article
Leave a comment