December 22, 2024

Newsnap Kannada

The World at your finger tips!

akashar

ಅಕ್ಷರ್ ಆರ್ಭಟಕ್ಕೆ ಬೆದರಿದ ಕೆರಿಬಿಯನ್ನರು-ಸರಣಿ ಗೆದ್ದು ಟೀಂ ಇಂಡಿಯಾ ವಿಶ್ವದಾಖಲೆ

Spread the love

ಆಲ್​​ರೌಂಡರ್​​​ ಅಕ್ಷರ್​​​ ಪಟೇಲ್​ ಆರ್ಭಟಕ್ಕೆ ಕಕ್ಕಾಬಿಕ್ಕಿಯಾದ ವೆಸ್ಟ್​ ಇಂಡೀಸ್​, 2ನೇ ಏಕದಿನ ಪಂದ್ಯದಲ್ಲೂ ಸೋಲನುಭವಿಸಿತು. ಕ್ವೀನ್ಸ್​​​ ಪಾರ್ಕ್​ ಓವಲ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 2 ವಿಕೆಟ್​ಗಳ ದಾಖಲೆಯ ಜಯ ದಾಖಲಿದ ಧವನ್​ ಪಡೆ, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ.

ಭಾರತಕ್ಕೆ ಎರಡು ವಿಕೆಟ್​​ಗಳ ರೋಚಕ ಗೆಲುವು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದ ಭಾರತ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ವಿಂಡೀಸ್ ತಂಡಕ್ಕೆ ಆಘಾತದ ನಡುವೆಯೂ ಮೊತ್ತ ಹೆಚ್ಚಿಸಲು ನೆರವಾದ ಪೂರನ್​​​, ಅರ್ಧಶತಕ ಸಿಡಿಸ್ತಿದ್ದಂತೆ ಔಟಾದ್ರೆ, ಇತ್ತ ದಾಖಲೆಯ ಸೆಂಚುರಿ ಸಿಡಿಸಿದ ಬಳಿಕ ಹೋಪ್​​ ಕೂಡ ಹೋಪ್​​​ ಕಳ್ಕೊಂಡ್ರು. ರಾವ್​​​ಮನ್​ ಪೊವೆಲ್​ ಕೂಡ ಇವರ ಬೆನ್ನ ಹಿಂದೆಯೇ ವಾಪಾಸ್​ ಆದರು. 

ಶಾಯ್​​ ಹೋಪ್​​​​ – ಪೂರನ್​ ಅದ್ಭುತ ಆಟದ ನೆರವಿನಿಂದ ವಿಂಡೀಸ್​​​, 50 ಓವರ್​​​​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 311 ರನ್​​ಗಳ ಕಠಿಣ ಗುರಿ ನೀಡಿತು.ಭಾರತದ ಪರ ಶಾರ್ದೂಲ್​ 3 ವಿಕೆಟ್​, ಹೂಡಾ, ಚಹಲ್​, ಅಕ್ಷರ್​​​ ತಲಾ 1 ವಿಕೆಟ್​ ಪಡೆದರು.

ಈ ಕಠಿಣ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ, ಉತ್ತಮ ಆರಂಭವನ್ನೇ ಪಡೆಯಿತು ಆರಂಭಿಕ ಶಿಖರ್​​ ಧವನ್​ ನಿಧಾನವಾಗಿ ಇನ್ನಿಂಗ್ಸ್​​ ಕಟ್ಟಿದರು, ಶುಭ್​​ಮನ್​ ಗಿಲ್​​​​​​​ ವೇಗವಾಗಿ ಬ್ಯಾಟ್​​ ಬೀಸಿದ್ರು. ಆದರೆ ಮೊದಲ ಪಂದ್ಯದಲ್ಲಿ ಮಿಂಚಿದ್ದ ಗಬ್ಬರ್​​, 2ನೇ ಮ್ಯಾಚ್​​​​​​​​​ನಲ್ಲಿ 13 ರನ್​​​ಗೆ​​ ವಿಕೆಟ್​ ಒಪ್ಪಿಸಿದ್ರು. ಈ ಬೆನ್ನಲ್ಲೇ ಅರ್ಧಶತಕದ ಅಂಚಿನಲ್ಲಿದ್ದ ಗಿಲ್​​ ಕೂಡ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಇನ್ನು ಸೂರ್ಯ ಕುಮಾರ್​​​​ ಯಾದವ್​ ಮತ್ತೆ ನಿರಾಸೆ ಮೂಡಿಸಿದರು.

ಅಪಾಯದಲ್ಲಿದ್ದ ಟೀಮ್​ ಇಂಡಿಯಾಗೆ ನೆರವಾಗಿದ್ದು, ಶ್ರೇಯಸ್​​ ಅಯ್ಯರ್​​-ಸಂಜು ಸ್ಯಾಮ್ಸನ್​ರ ಅದ್ಭುತ ಜೊತೆಯಾಟ. ಎಚ್ಚರಿಕೆಯ ಆಟವಾಡಿದ ಈ ಜೋಡಿ 4ನೇ ವಿಕೆಟ್​​​ಗೆ​​ 99 ರನ್​ ಸೇರಿಸಿ , ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. 2ನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ ಅಯ್ಯರ್​, ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಾಗ 63 ರನ್​ಗಳಿಸಿದ್ದಾಗ LBW ಬಲಿಯಾದರು.

ಅಯ್ಯರ್​​​​ ಔಟಾದ ಬಳಿಕ ಹೋರಾಟ ಮುಂದುವರೆಸಿದ ಸ್ಯಾಮ್ಸನ್​, ಏಕದಿನದಲ್ಲಿ ತಮ್ಮ ಮೊದಲ ಅರ್ಧಶತಕ ಸಿಡಿಸಿದರು ಆದ್ರೆ ಅರ್ಧಶತಕದ ಬೆನ್ನಲ್ಲೇ ರನೌಟ್​ ಆದರು ಸೋಲಿನ ದವಡೆಗೆ ಸಿಲುಕಿದ್ದ ತಂಡವನ್ನು ದೀಪಕ್​ ಹೂಡಾ – ಅಕ್ಷರ್​ ಪಟೇಲ್​​ ಅರ್ಧಶತಕದ ಜೊತೆಯಾಟ ಕೂಡ ಆಡಿದರು. ಅಕ್ಷರ್​​​ ಪಟೇಲ್​​​ ಸಿಕ್ಸರ್​​​ಗಳ ಸುರಿಮಳೆಗೈದು 27 ಎಸೆತಗಳಲ್ಲೇ ತಮ್ಮ ಮೊದಲ ಏಕದಿನ ಅರ್ಧಶತಕ ಸಿಡಿಸಿದರು.ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ್ದು ನಟ ಅಕ್ಷಯ್ ಕುಮಾರ್ : ತೆರಿಗೆ ಇಲಾಖೆ ಪ್ರಶಂಸನಾ ಪತ್ರ

ಕೊನೆಯಲ್ಲಿ ಆವೇಶ್​ ಖಾನ್​, ಅಕ್ಷರ್​​​ಗೆ ಸಾಥ್​ ನೀಡಿ ಔಟಾದ್ರು. ಕೊನೇ ಓವರ್​​​ನಲ್ಲಿ 3 ಎಸೆತಗಳಲ್ಲಿ 6 ರನ್​ ಅಗತ್ಯ ಇದ್ದಾಗ ವಿನ್ನಿಂಗ್​​​ ಸಿಕ್ಸ್​ ಸಿಡಿಸಿದ ಅಕ್ಷರ್​​, ಭಾರತಕ್ಕೆ ರೋಚಕ ಜಯ ತಂದರು.

Copyright © All rights reserved Newsnap | Newsever by AF themes.
error: Content is protected !!