September 29, 2022

Newsnap Kannada

The World at your finger tips!

akshya kumar

ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ್ದು ನಟ ಅಕ್ಷಯ್ ಕುಮಾರ್ : ತೆರಿಗೆ ಇಲಾಖೆ ಪ್ರಶಂಸನಾ ಪತ್ರ

Spread the love

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಸಂಬಂಧ ನಟ ಅಕ್ಷಯ ಕುಮಾರ್ ಮನೆಗೆ ಇಂದು ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ವಿಶೇಷ ಪತ್ರವೊಂದು ಕಳುಹಿಸಿದ್ದಾರೆ.

ಹಿಂದಿ ಚಲನಚಿತ್ರೋದ್ಯಮದಿಂದ ಅತಿ ಹೆಚ್ಚು ತೆರಿಗೆ ಪಾವತಿಸುವವರಲ್ಲಿ ನಟ ಅಕ್ಷಯ್ ಕುಮಾರ್ ಸಹ ಒಬ್ಬರು ಎಂದು ಗೌರವಯುತವಾಗಿ ಆದಾಯ ತೆರಿಗೆ ಇಲಾಖೆ ಬಾಲಿವುಡ್ ಕಿಲಾಡಿಗೆ ಸಮ್ಮಾನ್​ ಪತ್ರವನ್ನು ನೀಡಿದೆ.

ಈ ಮೂಲಕ ಅಕ್ಷಯ್ ಕುಮಾರ್ ಮತ್ತೊಮ್ಮೆ ಎಲ್ಲರಿಗೂ ಮಾದರಿಯಾಗಿದ್ದಾರೆ ಮತ್ತು ಹೆಚ್ಚು ತೆರಿಗೆ ಪಾವತಿಸುವವರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಅಕ್ಷಯ್​ಗೆ ನೀಡಿರುವ ಸಮ್ಮಾನ್ ಪ್ರತ್ರದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

29 . 5 ಕೋಟಿ ರು ತೆರಿಗೆ :

ಈ ಬಾರಿ 29.5 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸದ್ಯ ಅಕ್ಷಯ್ ಕುಮಾರ್ ಟಿನು ದೇಸಾಯಿ ಅವರ ಮುಂಬರುವ ಚಿತ್ರದ ಶೂಟಿಂಗ್​ಗಾಗಿ ಯುಕೆ ಅಲ್ಲಿ ಇದ್ದಾರೆ. ಹೀಗಾಗಿ ಸಮ್ಮಾನ್ ಪತ್ರವನ್ನು ಅವರ ತಂಡ ಸ್ವೀಕರಿಸಿದೆ ಎಂದು ಹೇಳಲಾಗಿದೆ.

ಕಳೆದ 5 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರರ ಪೈಕಿ ನಿರಂತರವಾಗಿ ನಟ ಅಕ್ಷಯ್‌ಗೆ ಈ ಗೌರವವನ್ನು ನೀಡಿರುವುದು ಇದೇ ಮೊದಲ ನಿದರ್ಶನವಲ್ಲ. ಈ ಹಿಂದೆಯೂ ಅಕ್ಷಯ್ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದರು.

error: Content is protected !!