ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ತೆರಿಗೆ ವಿನಾಯಿತಿ

Team Newsnap
1 Min Read

ಬೆಂಗಳೂರು : ಹಳೆಯ ವಾಹನಗಳನ್ನು ರದ್ದುಪಡಿಸಿ ಎಲೆಕ್ಟ್ರಿಕ್ ( electric ) ವಾಹನಗಳನ್ನು ಖರೀದಿಸುವವರಿಗೆ ತೆರಿಗೆ ವಿನಾಯಿತಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಂಪುಟ ಸಭೆ ಕಾರ್ ಗೆ 50,000 ರೂ , ಸ್ಕೂಟರ್ ಗೆ 5000 ರೂ.ವರೆಗೆ ವಾಹನ ತೆರಿಗೆ ವಿನಾಯಿತಿ ನೀಡಲಿದ್ದು, ಸರಕು ವಾಹನಗಳಿಗೆ ಶೇಕಡ 10 ರಷ್ಟು ತೆರಿಗೆ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸಿದೆ.

15 ವರ್ಷ ಹಳೆಯ ವಾಹನಗಳನ್ನು ರದ್ದುಪಡಿಸಿ, ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲು ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ ತೆರಿಗೆ ವಿನಾಯಿತಿ ಪಟ್ಟಿ ಪರಿಷ್ಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.ಕಲಬುರ್ಗಿಗೆ ಆಗಮಿಸಿದ ಪಿಎಂ ನರೇಂದ್ರ ಮೋದಿ

ಈ ಬಗ್ಗೆ ಸಚಿವ ಹೆಚ್.ಕೆ. ಪಾಟೀಲ್ ಸಂಪುಟ ಸಭೆಯ ಬಳಿಕ , ವಾಹನ ಸ್ಕ್ರಾಪಿಂಗ್ ಗೆ ನೀಡುವವರು ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ದ್ವಿಚಕ್ರ ವಾಹನಕ್ಕೆ 1 ಸಾವಿರದಿಂದ 5000 ರೂ.ವರೆಗೆ, 4 ಚಕ್ರದ ವಾಹನಗಳಿಗೆ 10,000 ದಿಂದ 50,000 ರೂ.ವರೆಗೆ, ಸರಕು ಸಾಗಣೆ ವಾಹನಗಳಿಗೆ ತೆರಿಗೆ ಮೊತ್ತದ ಶೇಕಡ 10ರಷ್ಟು ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Share This Article
Leave a comment