ಕರ್ನಾಟಕದ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

Team Newsnap
1 Min Read
  • 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ, ರಾಜ್ಯದ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರು ನೇಮಕವಾಗಿದ್ದಾರೆ.

ಕರ್ನಾಟಕದ ಉಸ್ತುವಾರಿಯಾಗಿದ್ದ ಗೆಹ್ಲೋಟ್ ಇದೀಗ ವಿ.ಆರ್.ವಾಲಾ ಜಾಗಕ್ಕೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟ ಪುನಾರಚನೆ ಚರ್ಚೆಯ ಬೆನ್ನಲ್ಲೇ ಗೆಹ್ಲೋಟ್ ಅವರನ್ನು ರಾಜ್ಯಪಾಲರಾಗಿ ನೇಮಕ ಕುತೂಹಲ ಹುಟ್ಟಿಸಿದೆ.

ಮೂಲತಃ ಮಧ್ಯಪ್ರದೇಶದವರಾದ ಗೆಹ್ಲೋಟ್, ದಲಿತ ಕುಟುಂಬದಲ್ಲಿ ಹುಟ್ಟಿದವರು. ಪ್ರಸ್ತುತ ರಾಜ್ಯಸಭಾ ಬಿಜೆಪಿ ನಾಯಕರಾಗಿದ್ದಾರೆ. ಕೇಂದ್ರ ಸಾಮಾಜಿಕ, ನ್ಯಾಯ, ಸಬಲೀಕರಣ ಸಚಿವರಾಗಿದ್ದರು.

ರಾಜ್ಯದಲ್ಲಿ 6 ವರ್ಷ 10 ತಿಂಗಳಿಂದ ವಜೂಭಾಯಿ ರುಧಾಬಾಯಿ ವಾಲಾ ರಾಜ್ಯಪಾಲರಾಗಿದ್ದಾರೆ. ವಿ.ಆರ್.ವಾಲಾ 2014ರ ಸೆಪ್ಟೆಂಬರ್‍ನಲ್ಲಿ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು. 2019ರ ಸೆಪ್ಟೆಂಬರ್ ನಲ್ಲಿ ವಿ ಆರ್ ವಾಲಾ ಅವರ 5 ವರ್ಷದ ಅಧಿಕಾರಾವಧಿ ಪೂರ್ಣಗೊಂಡಿತ್ತು. ಅಧಿಕಾರ ಮುಗಿದ ಬಳಿಕವೂ ವಾಲಾ ಅವರನ್ನೇ ಮುಂದುವರಿಸಲಾಗಿತ್ತು.

  • ಮಿಜೋರಾಂ ರಾಜ್ಯಪಾಲ – ಹರಿ ಬಾಬು ಕಂಭಂಪತಿ,
  • ಮಧ್ಯಪ್ರದೇಶ – ಮಂಗುಭಾಯ್ ಚಗನ್ಭಾಯ್ ಪಟೇಲ್
  • ಹಿಮಾಚಲ ಪ್ರದೇಶ – ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್
  • ಗೋವಾ- ಪಿ.ಎಸ್.ಶ್ರೀಧರನ್ ಪಿಳ್ಳೈ,
  • ತ್ರಿಪುರ ಸತ್ಯದೇವ್ ನಾರಾಯಣ್ ಆರ್ಯ,
  • ಜಾರ್ಖಂಡ್- ರಮೇಶ್ ಬೈಸ್
  • ಹರಿಯಾಣ- ರಾಜ್ಯಪಾಲಂ ಬಂದಾರು ದತ್ತಾತ್ರೇಯ
Share This Article
Leave a comment