ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಮಂತ್ರಿ , ಚಾಣಕ್ಯ ಅಮಿತ್ ಶಾ ಟಾಸ್ಕ್ ವೊಂದನ್ನು ನೀಡಿದ್ದಾರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಐವರು ನಾಯಕರನ್ನು ಶತಾಯ – ಗತಾಯ ಸೋಲಿಸಿ ಪಾಠ ಕಲಿಸಲೇಬೇಕು ಎಂದು ಶಾ ತಾಕೀತು ಮಾಡಿದ್ದಾರೆ.
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ , ಜಗದೀಶ್ ಶೆಟ್ಟರ್ , ಲಕ್ಷ್ಮಣ್ ಸವದಿ ಹಾಗೂ ಪ್ರಿಯಾಂಕಾ ಖರ್ಗೆ ಅವರುಗಳನ್ನು ಕಡ್ಡಾಯವಾಗಿ ಸೋಲಿಸಲು ತಂತ್ರಕ್ಕೆ ಪ್ರತಿ ತಂತ್ರ ಮಾಡಿ ಸೋಲಿಸಲು ಟಾರ್ಗೆಟ್ ಮಾಡುವಂತೆ ಕಡ್ಡಾಯ ಸೂಚನೆ ಕೊಟ್ಟಿದ್ದಾರೆ.
ಆರ್ ಎಸ್ ಎಸ್ ಸಹಾಯ ಪಡೆದುಕೊಂಡು ಸೋಲಿಸಲು ತಂತ್ರ ರೂಪಿಸಿ ಎಂದು ಹುಕುಂ ಹೊರಡಿಸಿದ್ದಾರೆ.