ತಮಿಳುನಾಡು: ಸರ್ಕಾರಿ‌ ನೌಕರರಿಗೆ 5 ದಿನ ಮಾತ್ರ ಕೆಲಸ

Team Newsnap
1 Min Read

ತಮಿಳುನಾಡಿನ ಸರ್ಕಾರಿ‌ ನೌಕರರು ಇನ್ನು ಮುಂದೆ ವಾರದಲ್ಲಿ ಕೇವಲ 5 ದಿನ ಮಾತ್ರ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ. ಜನವರಿ 2021ರಿಂದ ಜಾರಿಗೆ ಬರುವಂತೆ ಈ ಆದೇಶವನ್ನು‌ ಹೊರಡಿಸಿದೆ.

ಕೋರೋನಾ ಸೋಂಕಿನ‌ ಕಾರಣದಿಂದ ಕೇವಲ ದೇಶವಲ್ಲದೇ ಇಡೀ ಪ್ರಪಂಚದ ಕೆಲಸ ಕಾರ್ಯಗಳು ನಿಂತು ಹೋಗಿ ಆರ್ಥಿಕ ಚಟುವಟಿಕೆಗಳು ಕುಸಿತ ಕಂಡಿದ್ದವು.

ದೇಶದಲ್ಲೂ ಸಹ ಕೊರೋನಾ ತನ್ನ ವಿಶ್ವರೂಪ ತೋರಿಸಿತ್ತು. ಹಾಗಾಗಿ ಅನೇಕ ತಿಂಗಳುಗಳ ಕಾಲ ಸರ್ಕಾರ ಸ್ವಾಯತ್ತದ ಸಂಸ್ಥೆಗಳು ಸೇರಿದಂತೆ ಎಲ್ಲ ಸಂಸ್ಥೆಗಳು ಮುಚ್ಚಿದ್ದವು. ನಂತರ ತಮಿಳುನಾಡು ಸರ್ಕಾರ ಮೇ 15ರಂದು ವಾರಕ್ಕೆ 6 ದಿನಗಳ ಕಾಲ ಶೇ. 50% ರಷ್ಟು ಕೆಲಸಗಾರರೊಂದಿಗೆ ಸರ್ಕಾರಿ‌ ಸಂಸ್ಥೆಗಳು ಕೆಲಸ ನಿರ್ವಹಿಸುವಂತೆ ಸರ್ಕಾರ‌ ಆದೇಶ ನೀಡಿತ್ತು. ಲಾಕ್‌ಡೌನ್ ತೆರವಾದ ಬಳಿಕ‌ ಸೆಪ್ಟೆಂಬರ್ ‌ 1 ರಿಂದ ಶೇ. 100% ನಷ್ಟು ಕೆಲಸಗಾರರೊಂದಿಗೆ ಸರ್ಕಾರಿ ಸಂಸ್ಥೆಗಳು ಕೆಲಸ ಮಾಡುವಂತೆ ಹೇಳಿತ್ತು.

ಇದೀಗ‌ ತಮಿಳುನಾಡಿನ ಸರ್ಕಾರ ಜನವರಿ 2021ಕ್ಕೆ ಜಾರಿಗೆ ಬರುವಂತೆ ವಾರಕ್ಕೆ 5 ದಿನ‌ ಮಾತ್ರ ಕೆಲಸ ಮಾಡುವಂತೆ ಆದೇಶ ನೀಡಿದೆ.

Share This Article
Leave a comment