ತಮಿಳು ನಟ ವಿಜಯ್ ಕಾಂತ್ ಕೊರೊನಾಗೆ ಬಲಿ

Team Newsnap
1 Min Read
  • ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿಜಯ್ ಕಾಂತ್
  • ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ನಟ
  • ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟ

ಚೆನ್ನೈ: ನಟ ಹಾಗೂ ದೇಸಿಯಾ ಮುರ್ಪೊಕ್ಕು ದ್ರಾವಿಡಾ ಕಝಾಗಮ್ (DMDK) ಅಧ್ಯಕ್ಷ ಕ್ಯಾಪ್ಟನ್ ವಿಜಯ್ ಕಾಂತ್ (71) ಗುರುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು .

ನಟವಿಜಯ್ ಕಾಂತ್ ಅವರಿಗೆ ಇತ್ತೀಚೆಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದರು.

ಇದರ ಜೊತೆಗೆ ಇವರು ದೀರ್ಘಕಾಲದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಹೀಗಾಗಿ ಆಸ್ಪತ್ರೆಯಲ್ಲಿ ವಿಜಯ್ ಕಾಂತ್ ಅವರಿಗೆ ವೆಂಟಿಲೇಟರ್ ಅನ್ನು ಅಳವಡಿಸತ್ತಾದರೂ ಇಂದು ಬೆಳಗ್ಗೆ ನಿಧನರಾದರು .

Share This Article
Leave a comment