ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ.ಎಸ್. ಪುಟ್ಟರಾಜು ಒತ್ತಾಯಿಸಿದರು.
ಸುದ್ಧಿಗಾರರ ಜೊತೆ ಮಾತನಾಡಿದ ಪುಟ್ಟರಾಜು ನಾಡು ಕಂಡ ಮುತ್ಸದ್ದಿ ರಾಜಕಾರಣಿ ದೇವೇಗೌಡರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಲು, ಶಾಸಕರಾಗಲು ದೇವೇಗೌಡರ ಸಹಿಯುಳ್ಳ ಬಿ ಫಾರಂ ರಾಜಣ್ಣನವರಿಗೆ ಬೇಕಾಗಿತ್ತು. ಈಗ ಎಲ್ಲವನ್ನೂ ಅನುಭವಿಸಿದ ಮೇಲೆ ಇಂತಹ ನಿಕೃಷ್ಟ ಮಾತುಗಳನ್ನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.ಇದನ್ನು ಓದಿ –ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬಾರಿಸಿದ ಬೌಲರ್ ಬುಮ್ರಾ
ಇಂದಿರಾಗಾಂಧಿ, ವಾಜಪೇಯಿ ಅವರ ಸಮಕಾಲೀನರಾಗಿರುವ ದೇವೇಗೌಡರು ರಾಷ್ಟ್ರದ ಅಭ್ಯುದಯಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇದನ್ನು ತಿಳಿದೂ ಒಬ್ಬರು ಸಾಯುವಂತಹ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ದೇವೇಗೌಡರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಶನಿವಾರ ಪಾಂಡವಪುರ ಮತ್ತು ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜುಲೈ 3ರಂದು ಮಂಡ್ಯ, ಮಳವಳ್ಳಿ ಹಾಗೂ ನಾಗಮಂಗಲ ತಾಲೂಕಿನಲ್ಲೂ ಬೃಹತ್ ಪ್ರತಿಟನೆ ನಡೆಯಲಿದೆ. ಸೋಮವಾರ ಮದ್ದೂರು ಮತ್ತು ಶ್ರೀರಂಗಪಟ್ಟಣಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯಲಿವೆ.
ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ರಾಜಣ್ಣನ ಕ್ರಮ ಖಂಡಿಸಿ ಇಂದು ಪಾಂಡವಪುರ ಮತ್ತು ಕೆ.ಆರ್.ಪೇಟೆಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಭಾನುವಾರ ಮಂಡ್ಯ, ಮಳವಳ್ಳಿ ಹಾಗೂ ನಾಗಮಂಗಲ ತಾಲೂಕಿನಲ್ಲೂ ಬೃಹತ್ ಪ್ರತಿಟನೆ ನಡೆಯಲಿದೆ. ಸೋಮವಾರ ಮದ್ದೂರು ಮತ್ತು ಶ್ರೀರಂಗಪಟ್ಟಣಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.ನಮ್ಮತನ ಉಳಿಸಿಕೊಂಡು ಕನ್ನಡ ಭಾಷೆಯನ್ನು ಬೆಳೆಸಬೇಕು- ಟಿಎಸ್ ನಾಗಾಭರಣ
ಎಚ್.ಡಿ. ದೇವೇಗೌಡರು ಸೂರ್ಯ ಇದಂತೆ. ಸೂರ್ಯನನ್ನು ನೋಡಿ ಉಗಿದರೆ ಅದು ನಮ್ಮ ಮುಖಕ್ಕೇ ಬೀಳುವುದು ಎಂದು ರಾಜಣ್ಣನಂತರವರು ಅರಿತುಕೊಳ್ಳಬೇಕು. ನಡೆಯುತ್ತಿದ್ದ ಆನೆಯನ್ನು ಕಂಡ ನಾಯಿಗಳು ಬೊಗಳುತ್ತವೆ. ರಾಜಣ್ಣನಂತಹವರು ಆನೆಯ ಲದ್ದಿಯನ್ನೂ ಮುಟ್ಟಲು ಸಾಧ್ಯವಿಲ್ಲ, ವಿಕೃತ ಮನಸ್ಸಿನವರು ಮಾತನಾಡುತ್ತಾರೆ. ಅವರ ಶಾಪ ನಿಮ್ಮನ್ನು ಬಿಡದು, ಇನ್ನೂ ನೂರ್ಕಾಲ ಬಾಳಿ ಬದುಕುತ್ತಾರೆ. ಶತಾಯುಷಿಗಳಾಗಿ ನಾಡಿನ ಅನೇಕ ನಮ್ಮಂತಹವರಿಗೆ ಮಾರ್ಗದರ್ಶನ ಮಾಡುತ್ತಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, “ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವ ಕೆ.ಎನ್. ರಾಜಣ್ಣ ಒಬ್ಬ ಅನಾಗರೀಕ ವ್ಯಕ್ತಿ. ದೇಶದ ಪ್ರಧಾನಿಗಳೇ ದೇವೇಗೌಡರನ್ನು ಪಾರ್ಲಿಮೆಂಟಿನ ಬಾಗಿಲ ಬಳಿ ತೆರಳಿ ಕರೆದೊಯ್ಯುತ್ತಾರೆ. ಅಂತಹ ಅಜಾತಶತೃ ನಾಯಕನ ಬಗ್ಗೆ ಹೀಯಾಳಿಸಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ,” ಎಂದರು.
ರಾಷ್ಟ್ರ ಕಂಡ ಅಪ್ರತಿಮ ನಾಯಕನಾಗಿರುವ ದೇವೇಗೌಡರು ಕೇವಲ ಆರೇಳು ವರ್ಷಗಳ ಕಾಲ ಮಾತ್ರ ಅಧಿಕಾರ ಉಂಡವರು. ಉಳಿದ ಅವಧಿಯ ಆರು ದಶಕಗಳ ಕಾಲ ದೇಶದ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿದವರು. ಕೃಷ್ಣ ಯೋಜನೆಗಾಗಿ 16 ಸಾವಿರ ಕೋಟಿ ನೀಡಿದರು. ಈ ದೇಶದ ನೀರಾವರಿ ಯೋಜನೆಗಾಗಿ ಒಂದೂವರೆ ಲಕ್ಷ ಕೋಟಿ ರೂ.ಗಳು ಸರ್ಕಾರ ನೀಡುವಂತೆ ಮಾಡಿದವರು. ಇಂತಹ ನಾಯಕರ ಬಗ್ಗೆ ಲಘು ಹೇಳಿಕೆ ನೀಡಿರುವ ರಾಜಣ್ಣನನ್ನು ಕಾಂಗ್ರೆಸ್ ಪಕ್ಷ ಪ್ರಾಥಮಿಕ ಸದಸ್ಯತ್ವದಿಂದಲೇ ಕಿತ್ತುಹಾಕಬೇಕು ಎಂದು ಕಿಡಿಕಾರಿದರು.
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು