December 23, 2024

Newsnap Kannada

The World at your finger tips!

earthquake,taliban,india

Taliban thanked India for helping through Afghanistan earthquake

ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ -ಭಾರತದ ನೆರವು – ಧನ್ಯವಾದ ತಿಳಿಸಿದ ತಾಲಿಬಾನ್‌

Spread the love

ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಭಾರಿ ಭೂಕಂಪ ಸಂಭವಿಸಿ 1,000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಭೂಕಂಪದಿಂದಾಗಿ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವು ನೀಡಲು ಭಾರತ ಮುಂದಾಗಿದ್ದು, ಈಗಾಗಲೇ ತಂಡವೊಂದು ಕಾಬೂಲ್‌ ತಲುಪಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಈ ಕುರಿತು ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ರಿಡ್ಜ್ ಟೆಂಟ್‌ಗಳು, ಸ್ಲೀಪಿಂಗ್‌ ಬ್ಯಾಗ್ಸ್‌, ಹೊದಿಕೆಗಳು, ಸ್ಲೀಪಿಂಗ್‌ ಮ್ಯಾಟ್‌ ಸೇರಿದಂತೆ ಇತ್ಯಾದಿ ಅಗತ್ಯ ವಸ್ತುಗಳನ್ನು ಅಪ್ಘಾನ್‌ ಜನತೆಗೆ ನೆರವಿಗಾಗಿ ರವಾನಿಸಲಾಗಿದೆ. ಪರಿಹಾರ ಸರಕನ್ನು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (UNOCHA) ಮತ್ತು ಕಾಬೂಲ್‌ನಲ್ಲಿರುವ ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ (ARCS)ಗೆ ಹಸ್ತಾಂತರಿಸಲಾಗುವುದು.ಇದನ್ನು ಓದಿ –ರೈತನ ಮಗನಿಗೆ PSI ಕೆಲಸ – 30 ಲಕ್ಷ ರೂಪಾಯಿ ಪಂಗನಾಮ

ಜೂನ್ 22, 2022 ರಂದು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು, ಸಾವಿರಾರು ಮಂದಿ ತೊಂದರೆಗೆ ಸಿಲುಕಿದ್ದಾರೆ. ಸಂತ್ರಸ್ತರಿಗಾಗಿ ಭಾರತ ಸರ್ಕಾರವು ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ರವಾನಿಸಿದೆ ಎಂದು MEA ತಿಳಿಸಿದೆ.

ಸಂಕಷ್ಟಕ್ಕೆ ಸಿಲುಕಿರುವ ಆಫ್ಘನ್ನರ ರಕ್ಷಣೆಗೆ ರಾಜತಾಂತ್ರಿಕರು ಮತ್ತು ತಾಂತ್ರಿಕ ತಂಡವನ್ನು ಕಾಬೂಲ್‌ನಲ್ಲಿರುವ ರಾಯಭಾರಿ ಕಚೇರಿಗೆ ಕಳುಹಿಸಿರುವ ಭಾರತದ ನಿರ್ಧಾರ ಸ್ವಾಗತಾರ್ಹ ಎಂದು ತಾಲಿಬಾನ್‌ ವಕ್ತಾರ ಅಬ್ದುಲ್‌ ಕಹರ್‌ ಬಾಲ್ಚಿ ತಿಳಿಸಿದ್ದಾರೆ.ಅಫ್ಘಾನಿಸ್ತಾನಕ್ಕೆ ಮಾನವೀಯ ಸಹಾಯ ಒದಗಿಸಲು ತನ್ನ ತಾಂತ್ರಿಕ ತಂಡವನ್ನು ಕಳುಹಿಸಿದ ಭಾರತದ ನಿರ್ಧಾರವನ್ನು ತಾಲಿಬಾನ್ ಸ್ವಾಗತಿಸಿದೆ.

Copyright © All rights reserved Newsnap | Newsever by AF themes.
error: Content is protected !!