January 6, 2025

Newsnap Kannada

The World at your finger tips!

negar

ಕಾಬೂಲ್: ಗಂಡ, ಮಕ್ಕಳ ಎದುರೇ ಮಹಿಳಾ ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ ತಾಲಿಬಾನ್ ಉಗ್ರರು

Spread the love

ಆಫ್ಘಾನ್​ನ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಆಕೆಯ ಮಕ್ಕಳ ಮುಂದೆಯೇ ತಾಲಿಬಾನ್ ಉಗ್ರರು ಗುಂಡಿಟ್ಟು ಕೊಂದು ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ.

ಆಫ್ಘಾನ್​ನ ಘೋರ್​ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಕೋಹ್​ನಲ್ಲಿ ಕಳೆದ ರಾತ್ರಿ 10 ಗಂಟೆ ವೇಳೆಗೆ ಈ ಕೃತ್ಯ ಎಸಗಲಾಗಿದೆ.

ಮಹಿಳಾ ಪೋಲಿಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಬಾನು ನೆಗರ್​ ಅವರನ್ನು ಹತ್ಯೆ ಮಾಡಿದವರು ಎಂದು ಗುರುತಿಸಲಾಗಿದೆ.

ಸ್ಥಳೀಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನೆಗರ್​ 8 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

ತಮ್ಮ ವಿರುದ್ಧ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮನೆ ಬಾಗಿಲಿಗೆ ಹೋಗಿ ಹುಡುಕಿ ಹುಡುಕಿ ಮರಣದಂಡನೆ ನೀಡುತ್ತಿರುವ ತಾಲಿಬಾನಿಗಳು, ಮಹಿಳಾ ಪೊಲೀಸ್​ ಅಧಿಕಾರಿ ನೆಗರ್​ನನ್ನು ಅವರ ಗಂಡ ಮತ್ತು ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ.

ಕಾಬುಲ್‌ನಲ್ಲಿ ಉಗ್ರರ ಗುಂಪು ಪುನರುತ್ಥಾನಗೊಂಡ ದೇಶದಲ್ಲಿ ಕ್ರೌರ್ಯ ಮತ್ತು ದಮನದ ನೀತಿಯನ್ನು ಅನುಸರಿಸಿದೆ. ರಕ್ತಪಿಪಾಸುಗಳಂತೆ ತಮ್ಮ ವಿರೋಧಿಗಳ ಮಾರಣಹೋಮ ಮಾಡುತ್ತಿರುವುದಲ್ಲದೆ, ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!