ನಾಳೆಯಿಂದ ತಾಜ್‌ಮಹಲ್ ರಾತ್ರಿ ವೀಕ್ಷಣೆಗೆ ಮತ್ತೆ ಅವಕಾಶ

Team Newsnap
1 Min Read

ನಾಳೆಯಿಂದ ರಾತ್ರಿ ವೇಳೆ ತಾಜ್‌ಮಹಲ್ ವೀಕ್ಷಣೆಗೆ ಮತ್ತೆ ಅವಕಾಶ ನೀಡಲಾಗಿದೆ.

ಪ್ರವಾಸಿಗರು ಆಗಸ್ಟ್ 21 ರಿಂದ ಚಂದ್ರನ ಬೆಳಕಿನಲ್ಲಿ ಆಕರ್ಷಕ ಅಮೃತಶಿಲೆಯ ಸ್ಮಾರಕವನ್ನು ನೋಡಬಹುದಾಗಿದೆ.

ಕೊರೊನಾ ಕಾರಣಕ್ಕಾಗಿ ರಾತ್ರಿವೇಳೆ ತಾಜ್‌ಮಹಲ್ ವೀಕ್ಷಣೆಗೆ ಕಳೆದ ವರ್ಷದ ಮಾಚ್೯ 13 ರಿಂದ ನಿಷೇಧ ಹಾಕಲಾಯಿತು ಎಂದ ಆಗ್ರಾ ವೃತ್ತದ ಎಎಸ್‌ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಙ ವಸಂತಕುಮಾರ್ ಸ್ವರ್ಣಕರ್ ಹೇಳಿದ್ದಾರೆ.

TAJ MAHAL
Taj Mahal, monument in Uttar Pradesh

ರಾತ್ರಿ 8.30 ರಿಂದ 10ರ ತನಕ ವೀಕ್ಷಣೆಗೆ ಅವಕಾಶವಿದೆ. ಒಂದು ಸ್ಲಾಟ್‌ಗೆ ಅರ್ಧತಾಸುಗಳ ಕಾಲಾವಧಿ. ಪ್ರತಿ ಸ್ಲಾಟ್‌ನಲ್ಲಿ 50 ಪ್ರವಾಸಿಗರನ್ನು ಮಾತ್ರ ಬಿಡಲಾಗುತ್ತದೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಪಾಲಿಸಲಾಗುತ್ತೆ. ಒಂದು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು.

Share This Article
Leave a comment