December 2, 2021

Newsnap Kannada

The World at your finger tips!

T20 ವಿಶ್ವಕಪ್​ ತಂಡ ಪ್ರಕಟ : ಅಕ್ಷರ್ ಪಟೇಲ್​ ಬದಲಿಗೆ ಶಾರ್ದೂಲ್​​ಗೆ ತಂಡದಲ್ಲಿ ಸ್ಥಾನ

Spread the love

ಟಿ20 ವಿಶ್ವಕಪ್​​​ಗೆ ಪ್ರಕಟಿಸಲಾಗಿದೆ. ಭಾರತ ತಂಡದಲ್ಲಿ ಒಂದು ಬದಲಾವಣೆ ಮಾತ್ರ ಮಾಡಲಾಗಿದೆ.

ಈ ಮೊದಲು 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದ ಎಡಗೈ ಸ್ಪಿನ್ನರ್ ಅಕ್ಷರ್​ ಪಟೇಲ್​ರನ್ನು ಟೀಮ್​ ಇಂಡಿಯಾ ಆಯ್ಕೆಯ ಸಮಿತಿ ಕೈಬಿಟ್ಟಿದೆ.

ಅಕ್ಷರ್ ಸ್ಥಾನಕ್ಕೆ ವೇಗಿ ಶಾರ್ದೂಲ್​ ಠಾಕೂರ್​ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸೆಪ್ಟೆಂಬರ್​​ 8ರಂದು ಬಿಸಿಸಿಐ ಟಿ20 ವಿಶ್ವಕಪ್​​ಗೆ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ ತಂಡದಲ್ಲಿ ಬದಲಾವಣೆ ಮಾಡಲು ಐಸಿಸಿ, ಅಕ್ಟೋಬರ್​ 15ರವರೆಗೂ ಅವಕಾಶ ನೀಡಿತ್ತು. ಹೀಗಾಗಿ ಬಿಸಿಸಿಐ ಮತ್ತು ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ, ಅಕ್ಷರ್​​ ಪಟೇಲ್​ ಬದಲಿಗೆ ಶಾರ್ದೂಲ್​​ ಠಾಕೂರ್​ಗೆ ಮಣೆ ಹಾಕಿ, ಅಂತಿಮ ತಂಡವನ್ನು ಪ್ರಕಟಿಸಿದೆ.

ಭಾರತದ ತಂಡ ಹೀಗಿದೆ :

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್ , ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್​ಪ್ರಿತ್​ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.

ಸ್ಟ್ಯಾಂಡ್​ ಬೈ ಆಟಗಾರರು:

ಅಕ್ಷರ್ ಪಟೇಲ್, ದೀಪಕ್ ಚಹರ್, ಶ್ರೇಯಸ್ ಅಯ್ಯರ್

error: Content is protected !!