ಮೈಸೂರು ಜಿಲ್ಲೆಗೆ ಕೋವಿಡ್ ನಿರ್ವಹಣೆಗೆ 41 ಕೋಟಿ ರು ಹಣ ಬಂದಿದೆ. ಅದರಲ್ಲಿ 39 ಕೋಟಿ ರು ಖರ್ಚಾಗಿದೆ ಅಂತ ಹೇಳಿದ್ದಿರಿ. 39 ಕೋಟಿ ರು ಯಾರಿಗೆ ಕೊಟ್ಟಿದ್ದೀರಿ, ಯಾವುದಕ್ಕೆ ಖರ್ಚು ಮಾಡಿದ್ದೀರಿ ಎಂಬುದಕ್ಕೆ ಜಿಲ್ಲಾಧಿಕಾರಿ ಹಾಗೂ ಡಿಎಚ್ಓ ಮೊದಲು ಲೆಕ್ಕ ಕೊಡಲಿ ಎಂದು ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪಸಿಂಹ, ಡಿ.ಸಿ ರೋಹಿಣಿ ಸಿಂಧೂರಿ ವಿರುದ್ದ ಗುಡುಗಿ, ಜನ ಕೊರೊನಾ ಸಂಕಷ್ಟದಲ್ಲಿರುವಾಗ ಈಜುಕೊಳ ಬೇಕಿತ್ತಾ ನಿಮಗೆ? ಔಷಧಿ ಖರೀದಿಗೆ ಕಾನೂನು ಅಡ್ಡ ಬರುತ್ತೆ. 28 ಲಕ್ಷ ಖರ್ಚು ಮಾಡಿ ಸ್ಮಿಮ್ಮಿಂಗ್ ಪೂಲ್ ನಿರ್ಮಿಸೋಕೆ ಕಾನೂನು ಅಡ್ಡ ಬರಲಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಜನರನ್ನು ರಕ್ಷಿಸೋದು ಬಿಟ್ಟು ಮೋಜು ಮಸ್ತಿಗೆ ಉತ್ತೇಜನ ಕೊಡುವ ಇಂತಹ ಅಧಿಕಾರಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹರಿಹಾಯ್ದರು.
ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲೆಂದೇ ಪ್ರಧಾನಿಯವರು ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಆದರೆ ಈಗಲೂ ಕೂಡ ಇಲ್ಲದ ಸಬೂಬು ಹೇಳಿ ಅಳವಡಿಸದೆ ಹಾಗೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಕೇಳಿದ್ರೆ ತಪ್ಪಾ? ಪಿಎಂ ಕೇರ್ಸ್ನಿಂದ ಬಂದ 40 ವೆಂಟಿಲೇಟರ್ಗಳನ್ನ ಇನ್ನೂ ಅಳವಡಿಕೆ ಮಾಡಿಲ್ಲ. ಇದು ಜಿಲ್ಲಾಧಿಕಾರಿಗಳ ವೈಫಲ್ಯತೆ ತೋರಿಸುತ್ತೆ. ಇದನ್ನ ಕೇಳಿದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯೆ ಅಸಹಕಾರ ಹೇಗಾಗುತ್ತೆ? ಎಂದು ಪ್ರಶ್ನಿಸಿದ್ರು.
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
More Stories
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ