ಸಹೋದರರ ಸವಿ ನೆನಪು

Team Newsnap
4 Min Read

ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬ ಎಲ್ಲ ಸಹೋದರಿಯರು ಆತುರದಿಂದ ಕಾಯುವ ಹಬ್ಬ. ಆ ದಿನ ಸಹೋದರನಿಗೆ ಹಣೆಗೆ ತಿಲಕವನ್ನಿಟ್ಟು ತುಪ್ಪದಾರತಿ ಬೆಳಗಿ ದೇವರಲ್ಲಿ ಅವನ ಶ್ರೇಯೋಭಿಲಾಸೆಗಾಗಿ ಪ್ರಾರ್ಥನೆ ಮಾಡಿ, ರಾಖಿಯನ್ನ ಕಟ್ಟುವುದರ ಮೂಲಕ ನನ್ನನ್ನ ಯಾವತ್ತೂ ಯಾವ ಆಪತ್ತು ಬರದಂತೆ ರಕ್ಷಿಸು ಎಂದು ಆಸ್ವಾಸನೆಯನ್ನ ಹೊಂದುವ ದಿನ ಅದಕ್ಕೆ ಮರಳಿ ಸಹೋದರನಿಂದ ಕಾಣಿಕೆಯನ್ನ ಪಡೆಯುುವದು ವಾಡಿಕೆ.

sheetal hegde
ಶೀತಲ್ ಹೆಗಡೆ

ನಮ್ಮದು ೬ ಜನರ ಕುಟುಂಬ.ಅಪ್ಪ ಅಮ್ಮ, ಅಣ್ಣ, ನಾನು , ತಂಗಿ ಮತ್ತು ತಮ್ಮ. ಇದರಲ್ಲಿ ನಾನು ಮತ್ತು ಅಣ್ಣ ಒಂದು ಟೀಂ ಯಾವಾಗಲೂ ತಂಗಿ ಮತ್ತು ತಮ್ಮನ ಕಾಲೆಳೆಯುತ್ತಾ ಅಪ್ಪ-ಅಮ್ಮನ ಹತ್ರ ಬೈಸಕೊಳ್ಳುತ್ತಾ ಇರುತ್ತಿದ್ದೆವು. ಬೆಳಿಗ್ಗೆಯಿಂದ ಅಣ್ಣನ ಲೀಡರ್ ಶಿಪ್ಪ್ ಶುರು, ನನ್ನನ್ನ ಮತ್ತು ತಂಗಿಯನ್ನ ಸ್ಕೂಲಿಗೆ ಕರೆದುಕೊಂಡು ಹೋಗುವಾಗಿನಿಂದ ವಾಪಸ್ ಮನೆಗೆ ಕರೆದುಕೊಂಡು ಬರುವತನಕ ಅದು ಅವನ ಜವಾಬ್ದಾರಿ.ಅವನು ನನಗೆ ೨ ನೇ ಅಪ್ಪನೇ ಆಗಿದ್ದ. ಅವನ ಸೈಕಲ್ನಲ್ಲಿ ನಾನು ಅವನು ಹೊರಟೆವೆಂದರೆ ಮುುಗೀತು ಎಲ್ಲ ಒಂದ್ ರೌಂಡ್ ಮುುಗಿಸಿ ಬರುವಾಗ ನನಗಂತ ಪೇರಲೇ ಹಣ್ಣುಉಪ್ಪುಖಾರ ಹಾಕಿದ್ದು, ಚುರುಮುುರಿ, ಶೇಂಗಾ ಬೇಯಿಸಿದ್ದು… ಒಂದಲ್ಲ ಎರಡಲ್ಲ ನೆನಸಿಕೊಳ್ಳತ್ತಾ ಹೋದರೆ ದೊಡ್ಡ ಲೀಸ್ಟೇ ಆಗತ್ತೇ. ಶಾಲೆಯಲ್ಲಿ ಪ್ರವಾಸ ಅಂತ ಹೋದರೆ ನನಗೆ ಅಂತ ಕಲರ್ ಕಲರ್ ರಿಬ್ಬನ್, ಕ್ಲಿಪ್ಸ್… ಮತ್ತೊಂದು ಮಗದೊಂದು ತಂದುಕೊಡತಿದ್ದ. “ರಾಖಿ” ಹಬ್ಬದಲ್ಲಂತೂ ತುಂಬ ಖುುಷಿಯಿಂದ ಅವನ ಪಾಕೆಟ್ ಮನಿಯಿಂದ ನನಗೆ ದೊಡ್ಡ ಗಿಫ್ಟ ತಂಗಿಗೆ ಸರಿ ಸುಮಾರಾಗಿರುವಂತಹದ್ದು, ಆವಾಗ ಮನೆಯಲ್ಲಿ ಜಗಳವೇ ನಡಿತಿತ್ತು ಅಮ್ಮ ಸಮಾಧಾನ ಮಾಡಿಸೋರು.

ಹೈಸ್ಕೂಲ್ ಮುುಗಿದು ಕಾಲೇಜ್ ಗೆ ಬರೋ ಹೊತ್ತಿಗೆ ನನ್ನ ಅಪ್ಪ ತೀರಿಹೋಗಿದ್ದರು ಆಗ ಅವನು ಬೆಳಗಾಂನಲ್ಲಿ ಡಿಪ್ಲೋಮಾ ಮಾಡ್ತಾ ಇದ್ದ. ಆವಾಗ ನನಗೆ ಅಪ್ಪನ ಸ್ಥಾನ ತುಂಬಿ ಹಾಗೆಯೇ ಜವಾಬ್ದಾರಿಯಿಂದ ಎಡ್ಮಿಷನ್ ನಿಂದ ಹಿಡಿದು ಬಸ್ಪಾಸ್ ಎಲ್ಲ ಕಡೆಯಲ್ಲೂ ಸ್ವತಃ ತಾನೇ ನನ್ನ ಜೊತೆಗಿರತಾ ಇದ್ದ. ಕಾಲೇಜಿನಲ್ಲಿ ಒಂದಿಬ್ಬರು ನನಗೆ ಚುಡಾಯಿಸಿದ್ದಕ್ಕೆ ಅವನ ಹತ್ತಿರ ಒದೆ ತಿಂದ್ದಿದ್ದೂ ಇದೆ. ಅವನ ಡಿಪ್ಲೊಮಾ ನಂತರ ಅವನಿಗೆ ಕೆ.ಇ.ಬಿ ಯಲ್ಲಿ ನೌಕರಿ ಸಿಕ್ಕಿತ್ತು. ನನ್ನದೂ ಕಾಲೇಜ್ ಮುುಗಿದು, ಬಿಎಡ್ ಮಾಡಿ ಟೀಚರ್ ನೌಕರಿ ಸಿಕ್ಕಿದಾಗ ನನಗಿಂತ ಅವನ ಮುುಖ ಅರಳಿತ್ತು. ನಾನು ರೂಂ ಮಾಡಿಕೊಂಡಾಗಲೂ ೧೫ ದಿವಸಕ್ಕೆ ಒಮ್ಮೆ ವಿಚಾರಿಸಿಕೊಳ್ಳಲು ಬರತಾ ಇದ್ದ. ನನಗೆ ಇನ್ನೂ ಆ ಘಟನೆ ಕಣ್ಣಿಗೆ ಕಟ್ಟಿದ ಹಾಗೆಯೇ ಇದೆ. ಒಮ್ಮೆ ನನಗೆ ಜ್ವರ ಬಂದಾಗ ಮಲಗಿದ್ದು ನಾನಾದರೆ ಸಂಕಟ ಪಟ್ಟಿದ್ದು ಅವನು, ನಾನು ಹುಷಾರಾದ ಮೇಲೆ ಅಮ್ಮ ತಂಗಿ ಎಲ್ಲ ಆಡಕೊಂಡು ನಗುವವರೇ, ಅವನ ಪರಿಸ್ಥಿತಿ ಹೇಗಿತ್ತೆಂದರೆ “ಬೆಕ್ಕು ಬಾಲ ಸುಟ್ಟಿಕೊಂಡಾಗ ಚಡಪಡಿಸುವಂತೆ” ಅಂತ ನಗುವರು.
ಇನ್ನು ಮದುವೆ ಮಾಡೋ ಸಮಯ ಬಂದಾಗ , ನನ್ನದು ಲವ್ ಕಮ್ ಅರೆಂಜ್ ಮ್ಯಾರೇಜ್,ಆಗ ಅಣ್ಣ ನನಗೆ ಗದರಿಸಿದ್ದಿದೆ, ನಾನು ಪಟ್ಟುಹಿಡಿದು ಇಲ್ಲ ಬೇರೆ ಯಾರನ್ನೂ ಆಗಲಾರೆ ಆದರೆ ಅವರನ್ನೇ ಅಂತ ಅಂದಾಗ ನನಗೆ ಗೊತ್ತಿಲ್ಲದೇ (ನಮ್ಮವರನ್ನ) ಅವರ ಬಗ್ಗೆ ತಿಳಿದುಕೊಂಡು , ಸ್ವಲ್ಪ ಆವಾಜ್ ಹಾಕಿ ಬಂದದ್ದೂ ಇದೆ ಅದೇನು ನನ್ನ ಮತ್ತು ನನ್ನವರ ಮಧ್ಯೆ ಭಾಂದವ್ಯಕ್ಕೆ ಪರಿಣಾಮ ಬೀರಲಿಲ್ಲ, ಏಕೆಂದರೆ ಮುುಂದೊಂದು ದಿನ ಈ ಸೀನ್ ನಡೆಯಬಹುದೆಂಬ ಶಂಕೆಯಿಂದ ನಾ ಮೊದಲಾಗಿಯೇ ನಮ್ಮವರಿಗೆ ಅಣ್ಣನ ಸಮಾಚಾರ ಹೇಳಿದ್ದೆ. ಮದುವೆಯ ಸಮಯದಲ್ಲಿ ಅವನು ಆಡಿದ ಮಮತೆಯ ಮಾತುಗಳು, ಅವನ ಕಾಳಜಿ, ವಹಿಸಿಕೊಂಡ ಜವಾಬ್ದಾರಿಯನ್ನ ನೆನೆದಾಗ ನನ್ನ ಕಣ್ಣಂಚು ಒದ್ದೆಯಾಗುತ್ತದೆ. ಮದುವೆಯ ನಂತರ ನಾನು ಅಮೇರಿಕಾಗೆ ಹೋದೆ ಆಗೆಲ್ಲ ಸೆಲ್ ಫೋನ್ ಇಲ್ಲವಾದ ಕಾರಣ ಲ್ಯಾಂಡ್ ಲೈನ್ಗೆ ಕಾಲ್ ಮಾಡಿ ಗಂಟೆಗಟ್ಟಲೆ ಹರಟೆ ಹೆೊಡೆಯುುತ್ತಿದ್ದವು.
“ ಒಳ್ಳೆಯವರಿಗೆ ಕಾಲವಿಲ್ಲ,” ಅನ್ನುವುದು ಅಕ್ಷರಸಃ ಸತ್ಯ. ನನ್ನಪಾಲಿಗೆ ನಿಜವಾಗಿತ್ತು. ಭೂಮಿಯ ಮೇಲೆ ಬೇಕಾದವರು ದೇವರಿಗೂ ಬೇಕಂತೆ. ನಾನು ವರುಷಕ್ಕೆ ಒಂದಸಲ ಭಾರತಕ್ಕೆ ಬರುತ್ತಿದ್ದೆ. ಆಸಲ ನಾನು ಅಮೇರಿಕಾಗ್ಗೆ ವಾಪಸ್ಸಾದ ೨೦ ದಿನಕ್ಕೆ ಬೆಳಿಗ್ಗಿನ ಒಂದು ಕಾಲ್ ನನ್ನನ್ನು ಅಲ್ಲಾಡಿಸಿ ಬಿಟ್ಟಿತ್ತು. ನನ್ನ ಅಣ್ಣ ಬ್ರೈನ್ ಹೆಮರೆಜ್ ನಿಂದ ಕೊನೆಯುುಸಿರೆಳೆದಿದ್ದ . ಈಗಲೂ ನಾನು ಅವನನ್ನು ನೆನೆಯದ ದಿನಗಳಿಲ್ಲ. ಮುುಂದೊಂದು ಜನ್ಮ ಅಂತಿದ್ದರೆ ನನಗೆ ಅವನೇ ಅಣ್ಣನಾಗಬೇಕು ಮತ್ತು ದೇವರು ಆಯುಷ್ಯ, ಆರೋಗ್ಯ ನೀಡಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಜ ಹೇಳಬೇಕೆಂದರೆ, ರಾಖಿ ಹಬ್ಬ ಬಂದರೆ ಹೇಳಿಕೊಳ್ಳಲಾರದ ಸಂಕಟ, ಚಡಪಡಿಕೆ. ತಮ್ಮ ಇದ್ದಾನೆ ಆದ್ರೆ ಅವನ ಸಲುಗೆ ಕಮ್ಮಿ, ಅವವನಿರುವುದು ಗೋವಾದಲ್ಲಿ ಅಲ್ಲಿಗೇ ರಾಖಿ ಕಳಿಸುವೆ. ನನಗೆ ಮಗ ಹುಟ್ಟಿದಾಗ ಅವನ ನೆನಪೇ ಮನದ ತುಂಬೆಲ್ಲ. ಒಂದೊಂದು ಸಲ ಮಗ ನನ್ನ ಬಗ್ಗೆ ವಹಿಸುವ ಕಾಳಜಿ , ಅವನ ಮೃದುಮಾತುಗಳು ಹಾಗೂ ಹೋಲಿಕೆಯ ಮೇಲೆ ಅಣ್ಣನೇ ನನ್ನ ಮಗ ಅಂಬ ನಂಬಿಕೆ . “ಹೆಣ್ಣಿನ ಜನುಮಕೆ ಅಣ್ಣ-ತಮ್ಮರು ಬೇಕು . “ ಎಂಬುದು ಸತ್ಯ. ಅದರಲ್ಲಿಯೂ ನನ್ನ ಅಣ್ಣಎಲ್ಲರಿಗಿಂತ ಬೆಸ್ಟ.

Share This Article
Leave a comment