ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಮೃತ್ಯಂಜಯ ಶ್ರೀ ,ಸ್ಥಳೀಯ ಮುಖಂಡ ಮಹಾದೇವಯ್ಯ ಹಾಗೂ ಓರ್ವ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್‍ನಲ್ಲಿ ಮೂರು ಪುಟಗಳಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಿದ್ದರು.ಬೆಂಗಳೂರನಲ್ಲಿ ಹಿರಿಯನಟಿ ವಿನಯ ಪ್ರಸಾದ್ ಮನೆ ಕಳ್ಳತನ : 7 ಸಾವಿರ ಕದ್ದ ಖದೀಮರು
21ವರ್ಷದ ಯುವತಿಯನ್ನು ಬಿಟ್ಟು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿರುವ ಕುರಿತು ಹಾಗೂ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೇ ಕಣ್ಣೂರು ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿಂದ ಕಿರುಕುಳ ಎದುರಾಗಿದೆ. ಅವರು ಮಠದ ವಿಚಾರದಲ್ಲಿ ಆಗಾಗ ತೊಂದರೆ ಉಂಟುಮಾಡುತ್ತಿದ್ದಾರೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಯುವತಿಯೇ ಕಾರಣ ಎಂದು ಸಾವಿಗೂ ಮೊದಲು ಬಂಡೆ ಮಠದ ಶ್ರೀಗಳು ಡೆತ್ ನೋಟ್ ಬರೆದಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ರಾಮನಗರ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದರು. ಈ ವೇಳೆ ಬೆಂಗಳೂರು ಮೂಲದ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಣ್ಣೂರು ಶ್ರೀ ಹಾಗೂ ಬಂಡೆ ಮಠದ ಶ್ರೀಗಳು ಸಂಬಂಧಿಗಳಾಗಿರುವ ವಿಷಯ ಬೆಳಕಿಗೆ ಬಂದಿದೆ. ಅಪ್ಪು ಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಮಂಡ್ಯದ ಯುವಕ ಆತ್ಮಹತ್ಯೆಗೆ ಶರಣು
ಈ ವೇಳೆ ಕಣ್ಣೂರು ಶ್ರೀ ಪೀಠಕ್ಕಾಗಿ ಷಡ್ಯಂತ್ರ ನಡೆಸಿದ್ದ ವಿಷಯವು ಬೆಳಕಿಗೆ ಬಂದಿದ್ದು, ಕಣ್ಣೂರು ಶ್ರೀಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ ಸ್ವಾಮೀಜಿ ಜೊತೆ ಏಳೆಂಟು ಮಂದಿ ಸಹ ಕೈಜೋಡಿಸಿರುವ ಬಗ್ಗೆ ಮೂಲಗಳು ತಿಳಿಸಿವೆ.
- 8ನೇ ತರಗತಿ ವಿದ್ಯಾರ್ಥಿ Low ಬಿಪಿಯಿಂದ ಕುಸಿದು ಸಾವು
- ಮೈಸೂರು – ಕಲುಷಿತ ನೀರು ಸೇವಿಸಿ ಓರ್ವ ಸಾವು, 12 ಜನ ಅಸ್ವಸ್ಥ
- ಮಂಡ್ಯ ಭ್ರೂಣ ಹತ್ಯೆ ಪ್ರಕರಣ : ಆರು ಮಂದಿ ಬಂಧನ
- ನಟ ಕಿರಣ್ ರಾಜ್ ಕಾರು ಅಪಘಾತ : ಎದೆಗೆ ತೀವ್ರ ಪೆಟ್ಟು – ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಮುಡಾ ಹಗರಣ : 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
- ಮಾಧ್ಯಮಗಳ ಮೇಲೆ ನಿಷೇಧ ಹೇರುವಂತೆ ನಟ ದರ್ಶನ್ ಕೋರಿಕೆ