ಈ ಸ್ವಾಮೀಜಿಯನ್ನು ಯುವತಿಯೊಬ್ಬಳು ಹನಿಟ್ರ್ಯಾಪ್ ಗೆ ಬೀಳಿಸಿಕೊಂಡಿರುವ ಶಂಕೆಯ ಜೊತೆಗೆ ಮತ್ತೊಬ್ಬ ಸ್ವಾಮೀಜಿ ಯುವತಿ ಜೊತೆಗಿನ ಏಕಾಂತದ CD ಇಟ್ಟು ಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಸಾಧ್ಯತೆ ಇರುವ ಬಗ್ಗೆ ಸ್ವಾಮೀಜಿ ಬರೆದಿರುವ ಡೆತ್ ನೋಟ್ ನಲ್ಲಿರುವ ಸಂಶಯದ ಅಂಶಗಳು ತನಿಖೆ ಹಂತದಲ್ಲಿವೆ.
ಸ್ವಾಮೀಜಿಯವರು ಬರೆದ ಡೆತ್ ನೋಟ್ ನಲ್ಲಿ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಎಂದು ಉಲ್ಲೇಖಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.ಶಿವಮೊಗ್ಗದಲ್ಲಿ ಮತ್ತೆ ಹರಿದ ನೆತ್ತರು : ದುಷ್ಕರ್ಮಿಗಳಿಂದ ವ್ಯಕ್ತಿಯ ಹತ್ಯೆ
ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್ ನಡೆದಿದೆ ಎನ್ನಲಾಗಿದೆ . ಡೆತ್ನೋಟ್ನಲ್ಲಿ ಸಂಚಿನ ಬಗ್ಗೆ ಕುಂಚಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಬರೆದಿದ್ದಾರೆ. ಕುಂಚಗಲ್ ಸ್ವಾಮೀಜಿ ಕೆಳಗಿಳಿಸಲು ನಡೆದಿತ್ತು ಮಾಸ್ಟರ್ ಪ್ಲಾನ್, ಮಾಸ್ಟರ್ ಪ್ಲಾನ್ ಹಿಂದೆ ಇರೋ ವ್ಯಕ್ತಿ ಮತ್ತೋರ್ವ ಸ್ವಾಮೀಜಿ. ಮತ್ತೊಂದು ಮಠದ ಸ್ವಾಮೀಜಿ ತಂತ್ರಕ್ಕೆ ಬಲಿಯಾದೇ ಎಂದು ಡೆತ್ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಡೆತ್ನೋಟ್ನಲ್ಲಿ ಶ್ರೀಗಳು ಉಲ್ಲೇಖಿಸಿರುವ ಆಕೆ..ಆತ.. ಆ ಸ್ವಾಮೀಜಿ ಯಾರು..? ಸಿಡಿ ಯಾವಾಗ ಆಯ್ತು..? ಯಾರಿಗೋಸ್ಕರ CD ಮಾಡಿದ್ರು..? CD ಇಷ್ಟ್ಕೊಂಡು ಹೇಗೆಲ್ಲಾ ಬ್ಲಾಕ್ ಮೇಲ್ ಮಾಡಲಾಗಿತ್ತು..? ಎಂಬ ಅಂಶಗಳು ತನಿಖೆಗೆ ಒಳಪಟ್ಟಿವೆ.
ಕುಂಚಗಲ್ ಬಂಡೆ ಮಠದ ಬಸವಲಿಂಗಸ್ವಾಮೀಜಿ ವಿರುದ್ಧ ಮಹಾ ಸಂಚು ನಡೆದಿತ್ತು. 10-15 ಮಂದಿ ಸೇರಿ ಸಂಚು ರೂಪಿಸಿದ್ದಾರೆ. ಬಂಡೆ ಮಠಕ್ಕೆ ಯುವತಿಯೊಬ್ಬಳನ್ನು ಮತ್ತೊಬ್ಬ ಸ್ವಾಮೀಜಿ ಕಳಿಸಿದ್ದಾರೆ. ಮತ್ತೊಂದು ಮಠದ ಸ್ವಾಮೀಜಿ ಷಡ್ಯಂತ್ರ ಎಂದು ಡೆತ್ನೋಟ್ನಲ್ಲೇ ಉಲ್ಲೇಖ ಸಹ ಮಾಡಲಾಗಿದೆ.
ಈ ಹಿನ್ನೆಲೆ ಬಂಡೆಮಠವನ್ನು ತನ್ನ ಹಿಡಿತಕ್ಕೆ ತಗೆದುಕೊಳ್ಳಲು ಮತ್ತೊಬ್ಬ ಸ್ವಾಮೀಜಿ ಯತ್ನಿಸಿದ್ರಾ..? ತನ್ನ ಶಿಷ್ಯನನ್ನು ಬಂಡೆಮಠಕ್ಕೆ ಸ್ವಾಮೀಜಿ ಮಾಡೋ ಹುನ್ನಾರ ಆ ಸ್ವಾಮೀಜಿಗಿತ್ತಾ..? ಎಂಬ ಅನುಮಾನ ಶುರುವಾಗಿದೆ.
ಇದೇ ಕಾರಣದಿಂದ ಮಠಕ್ಕೆ ಕೆಲ ತಿಂಗಳ ಹಿಂದೆಯೇ ಓರ್ವ ಯುವತಿ ಪ್ರವೇಶ ಮಾಡಿ ಬಸವಲಿಂಗಸ್ವಾಮೀಜಿ ಜತೆ ಯುವತಿ ಸಲುಗೆ ಬೆಳೆಸಿಕೊಂಡಿದ್ದಾಳೆ. ನಿಧಾನವಾಗಿ ಹೆಣ್ಣಿನ ಮೋಹಕ್ಕೆ ಬೆರಗಾದ ಬಂಡೆಮಠದ ಸ್ವಾಮೀಜಿ,ಸುಮಾರು 10 ರಿಂದ 12 ಬಾರಿ ಆ ಯುವತಿ ಶ್ರೀಗಳ ಜತೆಗಿದ್ದ ಮಾಹಿತಿ ಕೇಳಿ ಬಂದಿದೆ. ಹಲವು ರಾತ್ರಿಗಳನ್ನು ಬಂಡೆ ಮಠದ ಸ್ವಾಮೀಜಿ ಜತೆ ಕಳೆದಿರುವ ಮಾಹಿತಿ ಹೊರಬಿದ್ದಿದೆ.
ಸ್ವಾಮೀಜಿ ಜತೆಗಿನ ಏಕಾಂತ ದೃಶ್ಯವನ್ನು ಸೆರೆ ಹಿಡಿದುಕೊಂಡಿದ್ದ ಯುವತಿ, ಇದೇ CD ಇಟ್ಕೊಂಡು ಬಸವಲಿಂಗಸ್ವಾಮೀಜಿಗೆ ಬ್ಲಾಕ್ ಮೇಲ್ ಮಾಡಲಾಗಿತ್ತು. CD ಬಹಿರಂಗ ಮಾಡದಂತೆ 10 ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದರಂತೆ ಸ್ವಾಮೀಜಿ. ಆದರೂ ಪ್ರತಿದಿನ ಚಿತ್ರಹಿಂಸೆ ನೀಡ್ತಾ ಇದ್ದ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ಆತನ ಗಾಳಕ್ಕೆ ಬಲಿಯಾದೆ ಎಂದು ಡೆತ್ನೋಟ್ನಲ್ಲಿ ಬಸವಲಿಂಗಶ್ರೀ ಬರೆದಿದ್ದಾರೆ.
ಅ 25ರಂದು CD ರಿಲೀಸ್ಗೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತಂತೆ ಅಕ್ಟೋಬರ್ 25ರಂದು ಡೆಡ್ಲೈನ್ ನೀಡಿದ್ರು ಆ ಡೀಲರ್ಸ್, 50 ಲಕ್ಷಕ್ಕೆ ಬೇಡಿಕೆ ಇಟ್ಟಿತ್ತು ಬ್ಲಾಕ್ಮೇಲ್ ಟೀಂ, ಈಗಾಗಲೇ 20 ಲಕ್ಷ ಹಣ ನೀಡಿದ್ದ ಬಸವಲಿಂಗಸ್ವಾಮೀಜಿ, ಅಕ್ಟೋಬರ್ 26ಕ್ಕೆ ನೂತನ ಕಟ್ಟಡದ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿಎಸ್ವೈ ಬರ್ತಾ ಇದ್ದರು, ಬಿಎಸ್ವೈ ಬರುವ ಮುನ್ನಾ ದಿನ CD ರಿಲೀಸ್ ಮಾಡೋ ಬೆದರಿಕೆ ಸ್ವಾಮೀಜಿಗೆ ಬಂದಿತ್ತು.
ಭಾನುವಾರ ಮಧ್ಯರಾತ್ರಿ 1.30ಕ್ಕೆ ಬಸವಲಿಂಗಶ್ರೀಗೆ ಲಾಸ್ಟ್ ಕಾಲ್ ಬಂದಿತ್ತು. 1.30ರ ಸುಮಾರಿಗೆ ಯಾರೋ ಜತೆ ಮಾತ್ನಾಡಿರುವ ಸ್ವಾಮೀಜಿ,
ಮಧ್ಯರಾತ್ರಿ 2ಗಂಟೆ ಸುಮಾರಿಗೆ ಕಿಟಕಿ ಕಂಬಿಗೆ ನೇಣು ಹಾಕಿಕೊಂಡಿದ್ದಾರೆ. ಕುದೂರು ಪೋಲಿಸರು ತನಿಖೆ ಚುರುಕುಗೊಳಿಸಿದ್ದಾರೆ.
More Stories
ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳ ನಿರ್ಧಾರ – ಶೀಘ್ರದಲ್ಲೇ ಅಧಿಕೃತ ಘೋಷಣೆ!
ನಾಳೆಯಿಂದ ಆರಂಭವಾಗುವ ದ್ವಿತೀಯ PUC ಪರೀಕ್ಷೆ – ಸಂಪೂರ್ಣ ಮಾಹಿತಿ ಇಲ್ಲಿದೆ!
SSLC ಮತ್ತು PUC ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಉಚಿತ KSRTC ಬಸ್ ಪ್ರಯಾಣ