January 28, 2026

Newsnap Kannada

The World at your finger tips!

5lak silver

ನಿಧಿ ಆಸೆ ತೋರಿಸಿ ದಂಪತಿಗೆ 5 ಲಕ್ಷ ರು ಪಂಗನಾಮ ಹಾಕಿದ ಕಳ್ಳ ಸ್ವಾಮೀಜಿ

Spread the love

ನಿಧಿ ಆಸೆ ತೋರಿಸಿ ದಂಪತಿಗೆ ಐದು ಲಕ್ಷ ರೂಪಾಯಿ ಪಂಗನಾಮ ಹಾಕಿ ಕಳ್ಳಸ್ವಾಮೀಜಿ ಎಸ್ಕೇಪ್ ಆದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಜರುಗಿದೆ..

ಮಂಜೇಗೌಡ-ಲೀಲಾವತಿ ಹಣ ಕಳೆದುಕೊಂಡ ದಂಪತಿ. ಅರಕಲಗೂಡು ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಮಂಜೇಗೌಡ (ಕಳ್ಳಸ್ವಾಮೀಜಿ) ನಿಮ್ಮ ಜಮೀನಿನಲ್ಲಿ ನಿಧಿ ಇದ್ದು, ನನ್ನಲ್ಲಿರುವ ದೈವ ಶಕ್ತಿಯಿಂದ ಅದನ್ನು ಹೊರ ತೆಗೆಯುತ್ತೇನೆ ಎಂದು ದಂಪತಿಯನ್ನು ನಂಬಿಸಿದ್ದಾನೆ.

ಮಂಜೇಗೌಡ ಹೊಲದಲ್ಲಿ ಚಿನ್ನ ಲೇಪಿತ ಮೂರು ಕೆಜಿ ಬೆಳ್ಳಿ ವಿಗ್ರಹ ಹೂತಿಟ್ಟಿದ್ದಾನೆ. ನಂತರ ರಾತ್ರಿ ವೇಳೆ ಜಮೀನಿಗೆ ಮಂಜೇಗೌಡ-ಲೀಲಾವತಿ ಕರೆದೊಯ್ದು ಮೊದಲು ಪೂಜೆ ಮಾಡಿ, ಜಮೀನಿನಲ್ಲಿ ಹೂತಿಟ್ಟಿದ್ದ ಚಿನ್ನ ಲೇಪಿತ ವಿಗ್ರಹ ಹೊರತೆಗೆದು ತೊಳೆದು ದಂಪತಿಗೆ ನೀಡಿದ್ದಾನೆ

ನಂತರ ಮಂಜೇಗೌಡ ಚಿನ್ನದ ವಿಗ್ರಹಕ್ಕೆ ರಕ್ತ ಅಭಿಷೇಕ ಮಾಡಬೇಕು ಎಂದು ಲೀಲಾವತಿಯ ಬೆರಳನ್ನೇ ಕೊಯ್ದಿದ್ದಾನೆ. ಬೆರಳು ಕೊಯ್ದ ರಭಸಕ್ಕೆ ಮಹಿಳೆ ಕೈ ಬೆರಳಿನ ನರವೇ ಕತ್ತರಿಸಿ ಹೋಗಿದೆ. ಒಂದು ವಾರದ ನಂತರ ಮಂಜೇಗೌಡ-ಲೀಲಾವತಿ ಜ್ಯೂವೆಲರಿ ಶಾಪ್‍ಗೆ ತೆರಳಿ ವಿಗ್ರಹ ಪರಿಶೀಲಿಸಿದಾಗ ಬೆಳ್ಳಿ ವಿಗ್ರಹ ಎಂಬುದು ಪತ್ತೆಯಾಗಿದೆ.

ಇತ್ತ ಕಳ್ಳ ಸ್ವಾಮೀಜಿ ದಂಪತಿಗೆ ವಂಚಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಣದ ಸಮೇತ ಎಸ್ಕೇಪ್ ಆಗಿದ್ದಾನೆ. ಇತ್ತ ಗಾಯಗೊಂಡಿದ್ದ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ.

ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣೆ ದೂರು ದಾಖಲಾಗಿದೆ.

error: Content is protected !!